ಇಂದು ವಿಕಾಸ್‌–ಕಿಡ್‌ ಪೈಪೋಟಿ ನ್ಯೂಯಾರ್ಕ್‌: ಭಾರತದ ವಿಕಾಸ್‌ ಕೃಷ್ಣ ಮತ್ತು ಅಮೆರಿಕದ ನೋಹ್‌ ಕಿಡ್‌ ನಡುವಣ ವೃತ್ತಿಪರ ಬಾಕ್ಸಿಂಗ್‌ ಪಂದ್ಯ ಶನಿವಾರ ನಡೆಯಲಿದೆ. ಆರು ಸುತ್ತುಗಳ ಸೂಪರ್‌ ವೆಲ್ಟರ್‌ವೇಟ್‌ ಹೋರಾಟ ಮ್ಯಾಡಿಸನ್‌ ಸ್ಕ್ವೇರ್‌ ಗಾರ್ಡನ್‌ನಲ್ಲಿ ನಿಗದಿಯಾಗಿದೆ. 27 ವರ್ಷ ವಯಸ್ಸಿನ ವಿಕಾಸ್‌, ಬಾಬ್‌ ಆರಮ್‌ ಅವರ ಟಾಪ್‌ ರ‍್ಯಾಂಕ್‌ ಪ್ರೊಮೋಷನ್ಸ್‌ ತಂಡವನ್ನು ಪ್ರತಿನಿಧಿಸುತ್ತಿದ್ದಾರೆ. ಈ ವರ್ಷದ ಜನವರಿಲ್ಲಿ ವೃತ್ತಿಪರ ಬಾಕ್ಸಿಂಗ್‌ಗೆ ಪದಾರ್ಪಣೆ ಮಾಡಿದ್ದ ಅವರು ಮೊದಲ ಹೋರಾಟದಲ್ಲಿ ಅಮೆರಿಕದ ಸ್ಟೀವನ್‌ ಆ್ಯಂಡ್ರೆಡ್‌ ಎದುರು ಗೆದ್ದಿದ್ದರು. ವಿಕಾಸ್‌ ಅವರು ನೆವಾರ್ಕ್‌, ನ್ಯೂ ಜೆರ್ಸಿಯಲ್ಲಿ ಬಾಕ್ಸಿಂಗ್ ಕೋಚ್‌ ವಾಲಿ ಮೋಸೆಸ್‌ ಅವರ ಬಳಿ ತರಬೇತಿ ಪಡೆದಿದ್ದರು. ಭಾರತದ ಬಾಕ್ಸರ್‌, ಏಷ್ಯನ್‌ ಮತ್ತು ಕಾಮನ್‌ವೆಲ್ತ್‌ ಕ್ರೀಡಾಕೂಟಗಳಲ್ಲಿ ಚಿನ್ನದ ಪದಕ ಗೆದ್ದಿದ್ದರು. ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಕಂಚಿನ ಪದಕ ಜಯಿಸಿದ ಹಿರಿಮೆಯನ್ನೂ ಹೊಂದಿದ್ದಾರೆ. 23 ವರ್ಷದ ಕಿಡ್‌, 2016ರ ಜುಲೈನಲ್ಲಿ ವೃತ್ತಿಪರ ಬಾಕ್ಸಿಂಗ್‌ಗೆ ಅಡಿ ಇಟ್ಟಿದ್ದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.