16ರ ಘಟ್ಟಕ್ಕೆ ದೀಪಕ್‌, ರೋಹಿತ್‌ ಬ್ಯಾಂಕಾಕ್: ಭಾರತದ ಬಾಕ್ಸರ್‌ಗಳಾದ ದೀಪಕ್ ಮತ್ತು ರೋಹಿತ್‌ ಟೋಕಸ್‌ ಅವರು ಏಷ್ಯನ್ ಬಾಕ್ಸಿಂಗ್ ಚಾಂಪಿಯನ್‌ಷಿಪ್‌ನ 16ರ ಘಟ್ಟಕ್ಕೆ ಶುಕ್ರವಾರ ಪ್ರವೇಶಿಸಿದರು. 49 ಕೆ.ಜಿ ವಿಭಾಗದಲ್ಲಿ ದೀಪಕ್‌ ಅವರು ವಿಯೆಟ್ನಾಂನ ಲೂಯಿ ಬೂಯಿ ಕಾಂಗ್‌ ಧನ್ನ ವಿರುದ್ಧ ಗೆದ್ದರೆ, 64 ಕೆ.ಜಿ ವಿಭಾಗದಲ್ಲಿ ರೋಹಿತ್‌ ಟೋಕಸ್‌ ಅವರು ತೈವಾನ್‌ನ ಚೌ ಎನ್‌ ಲಾಯ್ ವಿರುದ್ದ ಜಯ ಗಳಿಸಿದರು. ದೀಪಕ್ ಅವರು ಪ್ರಭಾವಶಾಲಿ ಪಂಚ್‌ಗಳಿಂದ ಎದುರಾಳಿ ವಿರುದ್ಧ ಮೇಲುಗೈ ಸಾಧಿಸಿದರು. ಬೂಯಿ ಕಾಂಗ್‌ ದನ್ನ ಅವರು ರಕ್ಷಣಾತ್ಮಕ ಆಟಕ್ಕೆ ಮೊರೆ ಹೋಗಬೇಕಾಯಿತು. ಇನ್ನೊಂದು ಪಂದ್ಯದಲ್ಲಿ ರೋಹಿತ್‌ ಅವರು ಚೌ ಎನ್ ಲಾಯ್ ಅವರನ್ನು ನೇರ ಹಿಟ್‌ ಮತ್ತು ಪಂಚ್‌ಗಳಿಂದ ಕಟ್ಟಿಹಾಕಿದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.