ಕಬಡ್ಡಿ ಹುಡುಗಿಯ ಪೋಲೀಸ್ ಕನಸು ’ಬೆಳೆಯುವ ಸಿರಿ ಮೊಳಕೆಯಲಿ’ ಎಂಬ ಮಾತಿನಂತೆ ಬಾಲ್ಯದಲ್ಲೇ ಪ್ರತಿಭೆಗೆ ಉತ್ತಮ ಪ್ರೋತ್ಸಾಹ ಹಾಗೂ ವೇದಿಕೆ ದೊರೆತರೆ ಮುಂದೊಂದು ದಿನ ಯಶಸ್ಸಿನ ಹಾದಿ ದೊರಕುವುದು ಖಚಿತ. ಅಂತೆಯೇ ಬಾಲ್ಯದಲ್ಲೇ ದೊರೆತ ಅವಕಾಶವನ್ನು ಕಡೆಗಣಿಸದೆ ಮುನ್ನುಗ್ಗಿ ಸಾಧಿಸಿದ ಹಲವಾರು ಪ್ರತಿಭೆಗಳ ಉದಾಹರಣೆಗಳಿವೆ. ಅಂತಹವರಲ್ಲಿ ಕ್ರೀಡಾ ಕ್ಷೇತ್ರದ ಮೂಲಕ ಸಾಧಿಸಿ ಹೆಸರುವಾಸಿಯಾಗಿರುವ ಹುಡುಗಿ ಸ್ಮಿತಾ ಕುಮಾರಿ. ವಿಟ್ಲದ ಜೂನಿಯರ್ ಕಾಲೇಜು ವಿದ್ಯಾರ್ಥಿನಿಯಗಿರುವ, ಇವರು ಮೂಲತಃ ಬಂಟ್ವಾಳ ತಾಲ್ಲೂಕಿನ ವಿಟ್ಲದ ಕೇಪು ನಿವಾಸಿ ಗಣೇಶ್ ನಾಯ್ಕ್ ಮತ್ತು ವೇದಾವತಿ ದಂಪತಿಯ ಪುತ್ರಿ. ಪ್ರಾಥಮಿಕ ಶಾಲೆಯಲ್ಲಿ ಓದುತ್ತಿರುವಾಗ ಬಾಲಕರು ಕಬಡ್ಡಿ ಆಡುವುದನ್ನು ಹೆಚ್ಚಾಗಿ ನೋಡುತ್ತಿದ್ದರಂತೆ. ಆಗ ಬಾಲಕಿಯರಿಗೆ ಯಾವುದೇ ರೀತಿಯ ಪ್ರೋತ್ಸಾಹ ಇರಲಿಲ್ಲ. ಹಾಗಾಗಿ ಇವರಿಗೆ ಕ್ರೀಡಾ ಕ್ಷೇತ್ರದಲ್ಲಿ ಮುನ್ನುಗ್ಗಲು ಸಾದ್ಯವಾಗಲಿಲ್ಲ. ಒಂದು ದಿನ ಇವರ ಆಸಕ್ತಿಯನ್ನು ಕಂಡ ದೈಹಿಕ ಶಿಕ್ಷಣ ಶಿಕ್ಷಕರು ಬಾಲಕಿಯರ ಕಬಡ್ಡಿ ತಂಡವನ್ನು ರಚಿಸಿದರು. ಅಂದಿನಿಂದ ಪ್ರಾರಂಭವಾದ ಇವರ ಕ್ರೀಡಾ ಪಯಣ ಇಂದಿಗೂ ಮುಂಚೂಣಿಯಲ್ಲೇ ಸಾಗುತ್ತಾ ಇದೆ. ಕ್ರೀಡಾ ಕ್ಷೇತ್ರದ ಪ್ರತಿಯೊಂದು ವಿಭಾಗದಲ್ಲಿಯೂ ಮುಂದಿರುವ ಇವರು ಅಥ್ಲೆಟಿಕ್ಸ್, ಲಾಂಗ್ ಜಂಪ್, ಹೈ ಜಂಪ್, ಪೋಲ್‍ವಾಲ್ಟ್, ನೆಟ್ ಬಾಲ್, ವಾಲಿಬಾಲ್ ತಾಲಿಮ್ ಆಟಗಳಲ್ಲಿ ತಮ್ಮನ್ನು ‌ತಾವು ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ. ಅಪ್ಪ- ಅಮ್ಮನ ಪ್ರೋತ್ಸಾಹ ಹಾಗೂ ಕಾಲೇಜಿನ ದೈಹಿಕ ಶಿಕ್ಷಕರಾದ ಸುಚೇತ್ ಅಂಚನ್ ಅವರ ಗರಡಿಯಲ್ಲಿ ಪಳಗಿರುವ ಇವರು ಈಗಾಗಲೇ ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ಮಿಂಚಿದ್ದಾರೆ. 2017-18 ನೇ ಸಾಲಿನಲ್ಲಿ ವಿಟ್ಲದಲ್ಲಿ ನಡೆದ ತಾಲ್ಲೂಕು ಮಟ್ಟದ ಕ್ರೀಡಾಕೂಟದ ಎತ್ತರ ಜಿಗಿತದಲ್ಲಿ ಪ್ರಥಮ, ಉದ್ದ ಜಿಗಿತ ದ್ವಿತೀಯ, 80ಮೀ ಹಡಲ್ಸ್ ದ್ವಿತೀಯ ಹಾಗೂ ತಾಲ್ಲೂಕು ವೈಯಕ್ತಿಕ ಚಾಂಪಿಯನ್‍ಶಿಪ್ ಅನ್ನು ಪಡೆದುಕೊಂಡಿದ್ದಾರೆ. 2018-19ನೇ ಸಾಲಿನಲ್ಲಿ ಬಂಟ್ವಾಳದ ಎಸ್.ವಿ.ಎಸ್ ಕಾಲೆಜಿನಲ್ಲಿ ನಡೆದ ಜಿಲ್ಲಾ ಮಟ್ಟದ ದಸರಾ ಕ್ರೀಡಾಕೂಟದಲ್ಲಿ 100ಮೀ ಅಡೆತಡೆ ಓಟ ಪ್ರಥಮ, 4/400ಮೀ ರಿಲೇ ಪ್ರಥಮ, ಹಾಗೂ ಮೂಡಬಿದಿರೆಯಲ್ಲಿ ನಡೆದ ನೆಟ್ ಬಾಲ್ ಸ್ಪರ್ದೆಯಲ್ಲಿ ಪ್ರಥಮ ಸ್ಥಾನವನ್ನು ತಮ್ಮದಾಗಸಿಕೊಂಡಿದ್ದಾರೆ. 2018-19ನೇ ಸಾಲಿನಲ್ಲಿ ಮೆಲ್ಕಾರ್ ನಲ್ಲಿ ನಡೆದ ಕ್ರೀಡೋತ್ಸವದ ಕೋಲುಜಿಗಿತ ಸ್ಪರ್ದೆಯಲ್ಲಿ ಪ್ರಥಮ, 100ಮೀ ಹಡಲ್ಸ್ ಪ್ರಥಮ, 4/100ಮೀ ಹಡಲ್ಸ್ ಪ್ರಥಮ, 4/400ಮೀ ರಿಲೇ ಪ್ರಥಮ, 4/400ಮೀ ಹಡಲ್ಸ್ ಪ್ರಥಮ ಸ್ಥಾನವನ್ನು ಗಿಟ್ಟಿಸಿಕೊಂಡಿದ್ದಾರೆ. 2018-19ನೇ ಸಾಲಿನಲ್ಲಿ ಬಂಟ್ವಾಳದ ಎಸ್.ವಿ.ಎಸ್ ನಲ್ಲಿ ನಡೆದ ಜಿಲ್ಲಾ ಮಟ್ಟದ ಕ್ರೀಡೋತ್ಸವದಲ್ಲಿ ವಾಲಿಬಾಲ್ ಪ್ರಥಮ. ಕಬಡ್ಡಿ ಪ್ರಥಮ, ಮತ್ತು ನೆಟ್‍ಬಾಲ್ ನಲ್ಲಿ ಪ್ರಥಮ ಸ್ಥಾನವನ್ನು ಪಡೆದು ರಾಜ್ಯಮಟ್ಟಕ್ಕೆ ಆಯ್ಕೆ. 2018-19ರ ಮೈಸೂರಿನಲ್ಲಿ ನಡೆದ ರಾಜ್ಯಮಟ್ಟದ ಟೆನ್ನಿಕಾಯ್ಟ್ ಸ್ಪರ್ದೆಯಲ್ಲಿ ಬಾಗವಹಿಸಿದ ಪ್ರತಿಭೆ ಸ್ಮಿತಾ. ಕಬಡ್ಡಿಯ ಪ್ರದೀಪ್ ನರ್ವಾಲ್ ರೋಲ್ ಮಾಡೆಲ್ ಆಗಿರುವ ಇವರಿಗೆ ಭವಿಷ್ಯದಲ್ಲಿ ಪೋಲೀಸ್ ಅಗಬೇಕೆಂಬ ಕನಸು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.