ಬಾಕ್ಸಿಂಗ್: ಪದಕ ಸುತ್ತಿನಲ್ಲಿ 13 ಮಂದಿ ಬ್ಯಾಂಕಾಕ್‌ (ಪಿಟಿಐ) : ಏಷ್ಯನ್‌ ಬಾಕ್ಸಿಂಗ್‌ ಚಾಂಪಿಯನ್‌ಷಿಪ್‌ನ ನಾಲ್ಕರ ಘಟ್ಟದ ಪಂದ್ಯಗಳು ಗುರುವಾರ ಆರಂಭವಾಗಲಿದ್ದು, ಭಾರತದ ಹದಿಮೂರು ಬಾಕ್ಸರ್‌ಗಳು ಪದಕ ಬೇಟೆಗೆ ಸಜ್ಜಾಗಿದ್ದಾರೆ. ಪುರುಷರ ಸೆಮಿಫೈನಲ್‌ ಪಂದ್ಯ ಗಳಲ್ಲಿ ದೀಪಕ್‌ ಸಿಂಗ್‌(49 ಕೆ.ಜಿ), ಅಮಿತ್‌ ಪಂಗಲ್ (52 ಕೆ.ಜಿ), ಕವಿಂದರ್ ಸಿಂಗ್ ಬಿಷ್ಟ್ (56 ಕೆ.ಜಿ), ಶಿವ ಥಾಪ (60 ಕೆ.ಜಿ), ಆಶಿಶ್ (69 ಕೆ.ಜಿ), ಆಶಿಶ್‌ ಕುಮಾರ್ (75 ಕೆ.ಜಿ) ಮತ್ತುಸತೀಶ್‌ ಕುಮಾರ್ (+91 ಕೆ.ಜಿ) ಭಾಗವಹಿಸಲಿದ್ದಾರೆ. ಮಹಿಳೆಯರ ವಿಭಾಗದಲ್ಲಿ ನಿಖತ್ ಜರೀನ್(51 ಕೆ.ಜಿ), ಮನೀಷಾ (54 ಕೆ.ಜಿ), ಸೋನಿಯಾ ಚಾಹಲ್(57 ಕೆ.ಜಿ), ಎಲ್‌. ಸರಿತಾ ದೇವಿ (60 ಕೆ.ಜಿ), ಸಿಮ್ರನ್‌ಜಿತ್ ಕೌರ್‌ (64 ಕೆ.ಜಿ) ಮತ್ತು ಪೂಜಾ ರಾಣಿ (75 ಕೆ.ಜಿ) ಸೆಣಸಲಿದ್ದಾರೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.