ಕೊಡವ ಹಾಕಿ: ಕೋದಂಡ ಚೆರುವಾಳಂಡ ತಂಡಕ್ಕೆ ಜಯ ಮಡಿಕೇರಿ: ಕೋದಂಡ ತಂಡವು ಕೊಡವ ಕೌಟುಂಬಿಕ ಹಾಕಿ ಚಾಂಪಿಯನ್ಸ್‌ ಟ್ರೋಫಿ ಟೂರ್ನಿಯಲ್ಲಿ ಬುಧವಾರ ಗೆಲುವು ಸಾಧಿಸಿ ಮುಂದಿನ ಸುತ್ತು ಪ್ರವೇಶಿಸಿತು. ಕಾಕೋಟುಪರಂಬು ಮೈದಾನದಲ್ಲಿ ಹಾಕಿ ಕೂರ್ಗ್‌ ಆಶ್ರಯದಲ್ಲಿ ನಡೆಯು ತ್ತಿರುವ ಟೂರ್ನಿಯಲ್ಲಿ ಕೋದಂಡವು 1–0 ಗೋಲಿನಿಂದ ಅಲ್ಲಾರಂಡ ತಂಡ ವನ್ನು ಮಣಿಸಿತು. ವಿಜೇತ ತಂಡದ ಪರ ಜಸ್ಸಿ ಅಪ್ಪಣ್ಣ ಏಕೈಕ ಗೋಲು ದಾಖಲಿಸಿದರು. ಕೊಂಗಂಡ ತಂಡವು 4-2 ಗೋಲು ಗಳಿಂದ ಪಾಲಂದಿರ ತಂಡವನ್ನು ಸೋಲಿಸಿತು. ಕುಮ್ಮಂಡ ತಂಡವು 2-0 ಗೋಲುಗಳಿಂದ ಚೇರಂಡದ ವಿರುದ್ಧ ಭರ್ಜರಿ ಗೆಲುವು ಸಾಧಿಸಿತು. ಕುಮ್ಮಂಡ ದ ಪರವಾಗಿ ನಾಗೇಶ್ ಎರಡು ಗೋಲು ತಂದಿತ್ತರು. ಅರೆಯಡ ತಂಡವು 2-0 ಗೋಲು ಗಳಿಂದ ಚೌರೀರ ವಿರುದ್ಧ ಜಯಿಸಿತು. ಅರೆಯಂಡ ಪರ ವಿವಿನ್ ಹಾಗೂ ಚಂಗಪ್ಪ ತಲಾ ಒಂದೊಂದು ಗೋಲು ಗಳಿಸಿದರು. ಉಳಿದಂತೆ ಕಾಂಡಂಡ ತಂಡವು 3-2 ಗೋಲುಗಳಿಂದ ಬೊಟ್ಟಂ ಗಡದ ವಿರುದ್ಧ; ಕನ್ನಂಡ ತಂಡವು 2-1 ಗೋಲುಗಳಿಂದ ಬೊಳಕಾರಂಡದ ಎದುರು; ಚೆರುವಾಳಂಡ ತಂಡವು 4-0 ಗೋಲುಗಳಿಂದ ಕುಂಚೇಟ್ಟಿರ ಮೇಲೆ ಜಯ ಸಾಧಿಸಿದವು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.