ಸೆಬಾಸ್ಟಿಯನ್‌ ವೆಟಲ್‌ ದಾಖಲೆ ಶಾಂಘೈ: ಫೆರಾರಿ ತಂಡದಸೆಬಾಸ್ಟಿಯನ್ ವೆಟಲ್ ‘ಫಾರ್ಮುಲಾ ಒನ್‌’ ಚೈನೀಸ್ ಗ್ರ್ಯಾನ್‌ಪ್ರೀ ರೇಸ್‌ನ ಅಭ್ಯಾಸ ಸ್ಪರ್ಧೆಯಲ್ಲಿ ವೇಗವಾಗಿ ಗುರಿ ಮುಟ್ಟಿ ದಾಖಲೆ ನಿರ್ಮಿಸಿದ್ದಾರೆ. ಶುಕ್ರವಾರ ನಡೆದ ಫಾರ್ಮುಲಾ ಒನ್‌ನ 1000ನೇ ರೇಸ್‌ನಲ್ಲಿ ಅಭ್ಯಾಸ ದಲ್ಲಿ ಪಾಲ್ಗೊಂಡಿದ್ದ ವೆಟಲ್‌, ಒಂದು ನಿಮಿಷ, 33.911 ಸೆಕೆಂಡುಗಳಲ್ಲಿ ಗುರಿ ತಲುಪಿ ದಾಖಲೆ ಬರೆದರು. ಮರ್ಸಿಡಿಸ್‌ ತಂಡದ ಲೂಯಿಸ್‌ ಹ್ಯಾಮಿಲ್ಟನ್ ಅವರು ವೆಟಲ್‌ಗಿಂತ 0.207 ಸೆಕೆಂಡ್‌ ತಡವಾಗಿ ಗುರಿಮುಟ್ಟಿ ಎರಡನೇ ಸ್ಥಾನ ಪಡೆದರೆ, ಫೆರಾರಿಯ ಚಾರ್ಲ್ಸ್ ಲೆಕ್ಲೆರ್ಕ್‌ ಮೂರನೆ ಸ್ಥಾನ ಪಡೆದರು. ಹಿಂದಿನ ಫಾರ್ಮುಲಾ ಒನ್‌ ರೇಸ್‌ಗಳಲ್ಲಿ ನಿರಾಸೆ ಅನುಭವಿಸಿದ್ದ 31ರ ವಯೋಮಾನದ ವೆಟಲ್‌ ಅವರು ಇಲ್ಲಿ ಮಿಂಚಿನ ಸಾಮರ್ಥ್ಯ ತೋರಿ ಪ್ರಶಸ್ತಿ ಗೆಲ್ಲುವ ಭರವಸೆ ಮೂಡಿಸಿದ್ದಾರೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.