ಹಾಕಿ: ಮುಕ್ಕಾಟಿರ ತಂಡಕ್ಕೆ ಜಯ ಮಡಿಕೇರಿ: ಮುಕ್ಕಾಟಿರ ತಂಡದವರು ಕೊಡವ ಕೌಟುಂಬಿಕ ಚಾಂಪಿಯನ್ಸ್‌ ಟ್ರೋಫಿ ಹಾಕಿ ಟೂರ್ನಿಯಲ್ಲಿ ಗುರುವಾರ ಗೆಲುವು ಸಾಧಿಸಿದರು. ಕಾಕೋಟುಪರಂಬು ಮೈದಾನದಲ್ಲಿ ಹಾಕಿ ಕೂರ್ಗ್‌ ಆಶ್ರಯದಲ್ಲಿ ನಡೆದ ಪಂದ್ಯದಲ್ಲಿ ಮುಕ್ಕಾಟಿರ ತಂಡವು 2-1 ಗೋಲುಗಳಿಂದ ಶಾಂತೆಯಂಡ ತಂಡವನ್ನು ಮಣಿಸಿತು. ವಿಜೇತ ತಂಡದ ಪರ ನಾಣಯ್ಯ ಹಾಗೂ ಕಾವ್ಯಾ ತಲಾ ಒಂದು ಗೋಲು ತಂದಿತ್ತರು. ಶಾಂತೆಯಂಡ ಪರ ತಿಮ್ಮಯ್ಯ ಏಕೈಕ ಗೋಲು ಗಳಿಸಿದರು. ಕಂಗಾಂಡ ತಂಡವು 4-2 ಗೋಲುಗಳಿಂದ ‘ಟೈಬ್ರೇಕರ್‌’ನಲ್ಲಿ ಬೊಳ್ಳಚೇಟ್ಟಿರ ತಂಡವನ್ನು ಮಣಿಸಿತು. ನಿಗದಿತ ಸಮಯದಲ್ಲಿ ಫಲಿತಾಂಶವು 1–1ರಲ್ಲಿ ಸಮಬಲವಾಗಿತ್ತು. ನಾಗಂಡ ತಂಡವು 3-0 ಗೋಲುಗಳಿಂದ ಬಲ್ಲಂಡ ತಂಡವನ್ನು ಸೋಲಿಸಿತು. ಪೆಮ್ಮಂಡ ತಂಡವು 4-0 ಗೋಲುಗಳಿಂದ ತಾಪಂಡ ವಿರುದ್ಧ; ಬಯವಂಡ ತಂಡವು 5-4 ಗೋಲುಗಳಿಂದ ಮುಂಡ್ಯೋಳಂಡದ ಎದುರು; ಐನಂಡ ತಂಡವು 5-0 ಗೋಲುಗಳಿಂದ ಬಲ್ಲಡಿಚಂಡ ಮೇಲೆ ಗೆದ್ದವು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.