ಬ್ಯಾಡ್ಮಿಂಟನ್‌: ಅನ್ಸಲ್‌, ಕನಿಕಗೆ ನಿರಾಸೆ ಬೆಂಗಳೂರು: ಅಗ್ರ ಶ್ರೇಯಾಂಕದ ಅನ್ಸಲ್ ಯಾದವ್‌ ಮತ್ತು ಎಡರನೇ ಶ್ರೇಯಾಂಕಿತೆ ಕನಿಕ ಕನ್ವಲ್‌ ಯಾದವ್‌ ಇಲ್ಲಿ ನಡೆಯುತ್ತಿರುವ ರಾಷ್ಟ್ರೀಯ ರ‍್ಯಾಂಕಿಂಗ್‌ ಬ್ಯಾಡ್ಮಿಂಟನ್ ಚಾಂಪಿಯನ್‌ಷಿಪ್‌ನಲ್ಲಿ ಶುಕ್ರವಾರ ನಿರಾಸೆ ಅನುಭವಿಸಿದರು. ಉತ್ತರ ಪ್ರದೇಶದ ಅನ್ಸಲ್ ಕ್ವಾರ್ಟರ್ ಫೈನಲ್‌ನಲ್ಇ ಕೇರಳದ ಕಿರಣ್ ಜಾರ್ಜ್ ಎದುರು 19–21, 21–17, 11–21ರಿಂದ ಸೋತರು. ರೈಲ್ವೆಯ ಕನಿಕಾ ಮಹಾರಾಷ್ಟ್ರದ ಮುಗ್ದಾ ಅಗ್ರೆಗೆ 19–21, 13–21ರಲ್ಲಿ ಮಣಿದರು. ಪುರುಷರ ಸಿಂಗಲ್ಸ್‌ನಲ್ಲಿ ಬೋಧಿತ್ ಜೋಶಿ ಅವರನ್ನು ಕರ್ನಾಟಕದ ಹೇಮಂತ್‌ ಗೌಡ 21–15, 22–20, 21–16ರಲ್ಲಿ ಸೋಲಿಸಿದರು. ಆದರೆ ಮೂರನೇ ಸುತ್ತಿನಲ್ಲಿ ಹೇಮಂತ್‌ 21–18, 15–21, 12–21ರಲ್ಲಿ ಕಾರ್ತಿಕೇಯ ಗುಲ್ಶನ್‌ ಕುಮಾರ್‌ಗೆ ಮಣಿದು ಹೊರಬಿದ್ದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.