ಬಾಕ್ಸಿಂಗ್‌: ಚಿನ್ನ ಗೆದ್ದ ಅಮಿತ್‌, ಪೂಜಾ ಬ್ಯಾಂಕಾಕ್‌: ಭಾರತದ ಅಮಿತ್‌ ಫಂಗಲ್ ಮತ್ತು ಪೂಜಾ ರಾಣಿ ಇಲ್ಲಿ ಶುಕ್ರವಾರ ಮುಕ್ತಾಯಗೊಂಡ ಏಷ್ಯನ್ ಬಾಕ್ಸಿಂಗ್ ಚಾಂಪಿಯನ್‌ಷಿಪ್‌ನಲ್ಲಿ ಚಿನ್ನ ಗೆದ್ದರು. 52 ಕೆಜಿ ವಿಭಾಗದಲ್ಲಿ ಸ್ಪರ್ಧಿಸಿದ ಅಮಿತ್‌ ದಕ್ಷಿಣ ಕೊರಿಯಾದ ಕಿಮ್ ಇಂಕ್ಯು ಅವರನ್ನು ಫೈನಲ್‌ನಲ್ಲಿ ಮಣಿಸಿದರು. ಪೂಜಾ ರಾಣಿ 81 ಕೆಜಿ ವಿಭಾಗದ ಫೈನಲ್‌ನಲ್ಲಿ ಚೀನಾದ ವಾಂಗ್ ಲಿನಾ ಎದುರು ಗೆದ್ದರು. ದೀಪಕ್ ಸಿಂಗ್‌, ಕವಿಂದರ್ ಸಿಂಗ್‌, ಆಶಿಶ್‌ ಕುಮಾರ್ ಮತ್ತು ಸಿಮ್ರನ್‌ಜೀಗ್ ಕೌರ್ ಬೆಳ್ಳಿ ಪದಕ ಗಳಿಸಿದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.