ಹಾಕಿ: ನೆರವಂಡ ತಂಡಕ್ಕೆ ಭರ್ಜರಿ ಗೆಲುವು ಮಡಿಕೇರಿ: ನೆರವಂಡ ತಂಡವು ಕೊಡವ ಕೌಟುಂಬಿಕ ಚಾಂಪಿಯನ್ಸ್‌ ಟ್ರೋಫಿ ಹಾಕಿ ಟೂರ್ನಿಯಲ್ಲಿ ಸೋಮ ವಾರ ಭರ್ಜರಿ ಗೆಲುವು ದಾಖಲಿಸಿತು. ಹಾಕಿ ಕೂರ್ಗ್‌ ಆಶ್ರಯದಲ್ಲಿ ಕಾಕೋಟುಪರಂಬು ಮೈದಾನದಲ್ಲಿ ನಡೆದ ಪಂದ್ಯದಲ್ಲಿ ನೆರವಂಡ ತಂಡ 5–1 ಗೋಲುಗಳಿಂದ ಕೈಬುಲಿರ ತಂಡವನ್ನು ಮಣಿಸಿತು. ನೆರವಂಡ ಪರವಾಗಿ ಪ್ರವೀಣ್‌ ಪೆಮ್ಮಯ್ಯ ಐದು ಗೋಲು ದಾಖಲಿಸಿದರು. ಕೈಬುಲಿರ ಪರ ಗಣಪತಿ ಗೋಲು ತಂದಿತ್ತರು. ಚೊಟ್ಟೇರ ತಂಡ 2-0 ಗೋಲುಗಳಿಂ ದ ಕಾಡ್ಯಮಾಡ ತಂಡವನ್ನು ಮಣಿಸಿ ಮುಂದಿನ ಸುತ್ತಿಗೆ ಪ್ರವೇಶಿಸಿತು. ವಿಜೇತ ತಂಡದ ಪರ ಬಿಪಿನ್ ಎರಡೂ ಗೋಲು ದಾಖಲಿಸಿದರು. ಕಳ್ಳಿಚಂಡ ತಂಡ 4-1 ಗೋಲು ಗಳಿಂದ ಮಳವಂಡ ತಂಡವನ್ನು ಪರಾಭವಗೊಳಿಸಿತು. ಕಳ್ಳಿಚಂಡದ ಪರ ವಾಗಿ ಬೋಪಣ್ಣ ಹಾಗೂ ಸಾವನ್ ತಲಾ ಎರಡು ಗೋಲು ತಂದಿತ್ತರು. ಐಚಂಡ ತಂಡವು ಏಕೈಕ ಗೋಲಿನಿಂದ ಕರೋಟಿರ ತಂಡ ಮಣಿಸಿ ಮುನ್ನಡೆಯಿತು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.