ಹಾಕಿ: ಪುಚ್ಚಿಮಾಡಕ್ಕೆ ಗೆಲುವು ವಿರಾಜಪೇಟೆ: ಮೇಕೇರಿರ, ಮಂಡೇಟಿರ, ಮುಕ್ಕಾಟಿರ (ಭೇತ್ರಿ), ಪುಚ್ಚಿಮಾಡ, ಕುಪ್ಪಂಡ ತಂಡಗಳು ಸಮೀಪದ ಕಾಕೋಟುಪರಂಬು ಮೈದಾನದಲ್ಲಿ ನಡೆಯುತ್ತಿರುವ ಕೊಡವ ಹಾಕಿ ಚಾಂಪಿಯನ್ಸ್‌ ಟ್ರೋಫಿಯಲ್ಲಿ ಗೆಲುವು ಸಾಧಿಸಿವೆ. ಹಾಕಿ ಕೂರ್ಗ್‌ ಆಶ್ರಯದಲ್ಲಿ ಭಾನುವಾರ ನಡೆದ ಪಂದ್ಯದಲ್ಲಿ ಮೇಕೇರಿರ ತಂಡವು 2–0 ಗೋಲುಗಳಿಂದ ಮಾಪಂಗಡ ತಂಡವನ್ನು ಮಣಿಸಿ, ಮುಂದಿನ ಹಂತ ಪ್ರವೇಶಿಸಿತು. ಮೇಕೇರಿರ ಪರ ನರ್ತನ್‌, ಅಭಿನವ್ ತಲಾ ಒಂದೊಂದು ಗೋಲು ಗಳಿಸಿದರು. ಮಂಡೇಟಿರ ತಂಡವು 4–0 ಗೋಲುಗಳಿಂದ ಮಂಡೇಡ ತಂಡವನ್ನು ಮಣಿಸಿತು. ಮುಕ್ಕಾಟೀರ (ಭೇತ್ರಿ) ತಂಡವು 5–1 ಗೋಲುಗಳಿಂದ ಮಾಣಿರ ವಿರುದ್ಧ ಗೆಲುವಿನ ನಗೆ ಬೀರಿತು. ಪುಚ್ಚಿಮಾಡ ತಂಡವು 8–2 ಗೋಲುಗಳಿಂದ ಬೆರೇರ ತಂಡದ ವಿರುದ್ಧ ಭರ್ಜರಿ ಗೆಲುವು ದಾಖಲಿಸಿತು. ಪುಚ್ಚಿಮಾಡದ ಯಶ್ವಿನ್ 4, ಮಿತ್ರ 2, ಭುವನ್ ಮತ್ತು ಮಾಚಯ್ಯ ತಲಾ ಒಂದೊಂದು ಗೋಲು ದಾಖಲಿಸಿದರು. ಕುಪ್ಪಂಡವು 7-0 ಗೋಲುಗಳಿಂದ ಬುಟ್ಟಿಯಂಡ ತಂಡವನ್ನು ಪರಾಭವಗೊಳಿಸಿತು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.