ಕಾವೇರಿ ಹ್ಯಾಟ್ರಿಕ್‌ ಗೋಲು ಬೆಂಗಳೂರು: ಕಾವೇರಿ ಎಲ್‌. ಅವರು ಗಳಿಸಿದ ಹ್ಯಾಟ್ರಿಕ್‌ ಗೋಲುಗಳ ನೆರವಿನಿಂದ ಡಿವೈಇಎಸ್‌ ಧಾರವಾಡ ತಂಡವು ಡಿವೈಇಎಸ್‌ ಶಿವಮೊಗ್ಗ ತಂಡವನ್ನು 6–0ಯಿಂದ ಮಣಿಸಿತು. ಇಲ್ಲಿನ ಶಾಂತಿನಗರದಲ್ಲಿರುವ ಕೆ.ಎಂ.ಕಾರ್ಯಪ್ಪ ಅರೆನಾದಲ್ಲಿ ನಡೆಯುತ್ತಿರುವ ರಾಜ್ಯಮಟ್ಟದ ಸಬ್‌ಜೂನಿಯರ್‌ ಮಹಿಳಾ ಹಾಕಿ ಟೂರ್ನಿಯ ಪಂದ್ಯದಲ್ಲಿ ಬುಧವಾರ ಕಾವೇರಿ 7, 25 ಹಾಗೂ 26ನೇ ನಿಮಿಷದಲ್ಲಿ ತಮ್ಮ ತಂಡಕ್ಕೆ ಯಶಸ್ಸು ತಂದುಕೊಟ್ಟರು. ವಿಜೇತ ತಂಡದ ಪರ ಇತರ ಮೂರು ಗೋಲುಗಳನ್ನು ಜ್ಯೋತಿ ಎಸ್‌. (15ನೇ ನಿಮಿಷ), ನಾಗಮ್ಮ (20ನೇ ನಿಮಿಷ) ಹಾಗೂ ಪದ್ಮಶ್ರೀ ಕೆ. (38ನೇ ನಿಮಿಷ) ದಾಖಲಿಸಿದರು. ದಿನದ ಮತ್ತೊಂದು ಪಂದ್ಯದಲ್ಲಿ ಡಿವೈಇಎಸ್‌ ಕೂಡಿಗೆ ತಂಡವು ಡಿವೈಇಎಸ್‌ ಪೊನ್ನಂಪೇಟೆ ಎದುರು 1–1ರ ಡ್ರಾ ಸಾಧಿಸಿತು. ಪೊನ್ನಂಪೇಟೆ ಪರ ನಿಸರ್ಗ ಎಸ್‌.ಬಿ. (13ನೇ ನಿಮಿಷ) ಹಾಗೂ ಕೂಡಿಗೆ ಪರ ಮಣಿ ಎಚ್‌. (28ನೇ ನಿಮಿಷ) ಗೋಲು ಹೊಡೆದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.