ಹಾಕಿ: ಪುದಿಯೊಕ್ಕಡಕ್ಕೆ ಗೆಲುವು ಮಡಿಕೇರಿ: ಕಾಂಡಂಡ ತಂಡವು ಕೊಡವ ಕೌಟುಂಬಿಕ ಚಾಂಪಿಯನ್ಸ್‌ ಟ್ರೋಫಿ ಹಾಕಿ ಟೂರ್ನಿಯಲ್ಲಿ ಗುರುವಾರ ಗೆಲುವು ಸಾಧಿಸಿತು. ಕಾಕೋಟುಪರಂಬು ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಕಾಂಡಂಡ ತಂಡವು 1-0 ಗೋಲಿನಿಂದ ಕನ್ನಂಡ ತಂಡವನ್ನು ಸೋಲಿಸಿತು. ಅಪ್ಪಣ್ಣ ಏಕೈಕ ಗೋಲು ಗಳಿಸಿದರು. ಕಾಳೇಂಗಡ ತಂಡವು 4-0 ಗೋಲುಗಳಿಂದ ಸಣ್ಣುವಂಡ ತಂಡವನ್ನು ಪರಾಭವಗೊಳಿಸಿತು. ಕಾಳೇಂಗಡ ಪರ ಬೋಪಣ್ಣ ಎರಡು, ಯಶ್ವಿನ್ ಹಾಗೂ ಮೊನೀಶ್ ತಲಾ ಒಂದೊಂದು ಗೋಲು ತಂದಿತ್ತರು. ಪುದಿಯೊಕ್ಕಡ ತಂಡವು 7-0 ಗೋಲುಗಳಿಂದ ಮಂಡಿರ ತಂಡದ ವಿರುದ್ಧ ಗೆಲುವು ಸಾಧಿಸಿತು. ವಿಜಯಿ ತಂಡದ ಪ್ರಧಾನ್, ವಿಪಿನ್ ತಲಾ ಎರಡು ಗೋಲು, ಸುಮನ್, ರತನ್ ಹಾಗೂ ಅಭಿನ್ ತಲಾ ಒಂದೊಂದು ದಾಖಲಿಸಿದರು. ಕಡೇಮಾಡ ತಂಡವು 4-3 ಗೋಲು ಗಳಿಂದ ‘ಟೈಬ್ರೇಕರ್‌’ನಲ್ಲಿ ಕೋದಂಡ ತಂಡವನ್ನು ಸೋಲಿಸಿತು. ನಿಗದಿತ ಅವಧಿಯಲ್ಲಿ ತೀವ್ರ ಹೋರಾಟದಿಂದ ಪಂದ್ಯ ಸಮಬಲವಾಗಿತ್ತು. ಅರೆಯಡ ತಂಡವು 1-0 ಗೋಲಿನಿಂದ ಚೊಯ ಮಾಡಂಡ ತಂಡವನ್ನು ಮಣಿಸಿತು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.