ಚೆಸ್‌: ಆರುಷ್‌, ನಿವಾನ್‌ ಸಾಧನೆ ಮುಂಬೈ: ವಿಶ್ವ ಚೆಸ್‌ ಚಾಂಪಿಯನ್‌ಷಿಪ್‌ನಲ್ಲಿ ಪುಣೆಯ ಚಿಣ್ಣರು ದಾಖಲೆ ಬರೆದಿದ್ದಾರೆ. ಆರು ವರ್ಷದ ಆರುಷ್‌ ಧೋಲಸ್ ಮತ್ತು ನಿವಾನ್‌ ಖಂದಾಡಿಯಾ ಟರ್ಕಿಯಅಂತಾಲ್ಯಾದಲ್ಲಿ ನಡೆದ ಚಾಂಪಿಯನ್‌ಷಿಪ್‌ನಲ್ಲಿ ಕ್ರಮವಾಗಿ ಚಿನ್ನ ಮತ್ತು ಕಂಚಿನ ಪದಕ ಗೆದ್ದಿದ್ದಾರೆ. ಜೊತೆಗೆ ಆರುಷ್‌ ಅವರಿಗೆ ‘ಕ್ಯಾಂಡಿಡೇಟ್‌ ಮಾಸ್ಟರ್‌’ ಬಿರುದು ಸಂದಿದೆ.ಪುಣೆಯ ಬಿಷಪ್‌ ಪ್ರೌಢಶಾಲೆಯಲ್ಲಿ ಓದುತ್ತಿರುವ ಧೋಲಸ್, ಏಳು ವರ್ಷದೊಳಗಿನವರ ಸ್ಪರ್ಧೆಯ ಒಂಬತ್ತು ಸುತ್ತುಗಳಲ್ಲಿ 8 ಅಂಕ ಪಡೆದು ಚಿನ್ನಕ್ಕೆ ಕೊರಳೊಡ್ಡಿದರೆ, ಇದೇ ವಿಭಾಗದಲ್ಲಿ ನಿವಾನ್‌ ಖಂದಾಡಿಯಾ ಸ್ಪರ್ಧಿಸಿ 6.5 ಅಂಕ ಪಡೆದು ಕಂಚು ಗೆದ್ದಿದ್ದಾರೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.