ಒಲಿಂಪಿಕ್ಸ್‌ಗೆ ಅಭಿಷೇಕ್ ಅರ್ಹತೆ ಬೀಜಿಂಗ್‌ (ಪಿಟಿಐ): ಮುಂದಿನ ವರ್ಷ ಜಪಾನ್‌ನ ಟೋಕಿಯೊದಲ್ಲಿ ನಡೆಯಲಿರುವ ಒಲಿಂಪಿಕ್ಸ್‌ಗೆ ಭಾರತದ ಅಭಿಷೇಕ್ ವರ್ಮಾ ಅರ್ಹತೆ ಗಳಿಸಿದ್ದಾರೆ. ಶನಿವಾರ ಇಲ್ಲಿ ನಡೆದ ಎಐಎಸ್‌ಎಸ್‌ಎಫ್ ವಿಶ್ವ ಶೂಟಿಂಗ್‌ನಲ್ಲಿ ಅವರು ಚಿನ್ನದ ಪದಕ ಗಳಿಸಿದರು. ಅಭಿಷೇಕ್‌ ಅವರು ಟೋಕಿಯೊ ಟಿಕೆಟ್‌ ಪಡೆದ ಭಾರತದ ಐದನೇ ಶೂಟರ್‌ ಆಗಿದ್ದಾರೆ. ಅವರು ಪುರುಷರ 10 ಮೀಟರ್ಸ್‌ ಏರ್‌ ಪಿಸ್ತೂಲ್‌ ವಿಭಾಗದಲ್ಲಿ ಚಿನ್ನದ ಪದಕಕ್ಕೆ ಕೊರಳೊಡ್ಡಿದರು. ಫೈನಲ್‌ನಲ್ಲಿ ಭಾರತದ ಶೂಟರ್‌ ಒಟ್ಟು 242.7 ಪಾಯಿಂಟ್ಸ್‌ ಗಳಿಸಿ ಗಮನ ಸೆಳೆದರು.ಅಂಜುಮ್‌ ಮೋದ್ಗಿಲ್‌, ಅಪೂರ್ವಿ ಚಾಂಡೇಲಾ (ಇಬ್ಬರೂ 10 ಮೀಟರ್ಸ್‌ ಏರ್‌ ರೈಫಲ್‌)ಒಲಿಂಪಿಕ್ಸ್‌ಗೆ ಅರ್ಹತೆ ಗಿಟ್ಟಿಸಿಕೊಂಡಿದ್ದಾರೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.