ಬ್ಯಾಸ್ಕೆಟ್‌ಬಾಲ್: ವಿಮಾನಪುರ ಕ್ಲಬ್‌ಗೆ ಜಯ ಬೆಂಗಳೂರು: ರೋಹನ್ಸ್‌ ಶೋನೆ (12 ಪಾಯಿಂಟ್ಸ್‌) ಉತ್ತಮ ಆಟದಿಂದಾಗಿ ವಿಮಾನಪುರ ಸ್ಪೋರ್ಟ್ಸ್‌ ಕ್ಲಬ್ ತಂಡವು 16 ವರ್ಷದೊಳಗಿನವರ ರಾಜ್ಯ ಯೂತ್ ಬ್ಯಾಸ್ಕೆಟ್‌ಬಾಲ್ ಚಾಂಪಿಯನ್‌ಷಿಪ್‌ನಲ್ಲಿ ಜಯಿಸಿತು. ಕಂಠೀರವ ಕ್ರೀಡಾಂಗಣದಲ್ಲಿ ಶುಕ್ರವಾರ ನಡೆದ ಪಂದ್ಯದಲ್ಲಿ ವಿಮಾನಪುರ ತಂಡವು 46–12ರಿಂದ ಮೈಸೂರು ಬ್ಯಾಸ್ಕೆಟ್‌ಬಾಲ್ ಕ್ಲಬ್ ಎದುರು ಗೆದ್ದಿತು. ಬಾಲಕರ ವಿಭಾಗದ ಇನ್ನೊಂದು ಪಂದ್ಯದಲ್ಲಿ ಧಾರವಾಡದ ಮಲ್ಲಸಜ್ಜನ ಬ್ಯಾಸ್ಕೆಟ್‌ಬಾಲ್ ಕ್ಲಬ್ 39–7ರಿಂದ ದಾವಣಗೆರೆಯ ಗ್ರೀನ್ಸ್‌ ಕ್ಲಬ್‌ ವಿರುದ್ಧ ಜಯಿಸಿತು. ಎಂ.ಎನ್‌.ಕೆ ರಾವ್ ಪಾರ್ಕ್ ತಂಡವು 34–16ರಿಂದ ಧಾರವಾಡದ ರೋವರ್ಸ್‌ ಕ್ಲಬ್‌ ವಿರುದ್ಧ ಗೆದ್ದಿತು. ಬಾಲಕಿಯರ ವಿಭಾಗದಲ್ಲಿ; ಎನ್‌ಜಿವಿಬಿಸಿ 51–46 ರಿಂದ ರಾಜಮಹಲ್ ಕ್ಲಬ್ ವಿರುದ್ಧ; ಹಲಸೂರು ಕ್ಲಬ್‌ 32–11ರಿಂದ ದಾವಣಗೆರೆಯ ಮರ್ಚಂಟ್ಸ್‌ ವಿರುದ್ಧ; ಯಂಗ್ ಓರಿಯನ್ಸ್‌ 25–18ರಿಂದ ಧಾರವಾಡದ ಮಲ್ಲಸಜ್ಜನ ಕ್ಲಬ್ ವಿರುದ್ಧ; ವಿಜಯಪುರದ ಡಿವೈಇಎಸ್‌ 41–31ರಿಂದ ಎಂ.ಎನ್.ಕೆ.ರಾವ್ ಪಾರ್ಕ್ ವಿರುದ್ಧ ಜಯಿಸಿತು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.