ಹಾಕಿ: ನೆಲ್ಲಮಕ್ಕಡಕ್ಕೆ ಭರ್ಜರಿ ಜಯ ಮಡಿಕೇರಿ: ನೆಲ್ಲಮಕ್ಕಡ ತಂಡವು ಕೊಡವ ಕೌಟುಂಬಿಕ ಚಾಂಪಿಯನ್ಸ್‌ ಟ್ರೋಫಿ ಹಾಕಿ ಟೂರ್ನಿಯಲ್ಲಿ ಗೆಲುವು ಪಡೆದು ಮುಂದಿನ ಸುತ್ತಿಗೆ ಪ್ರವೇಶಿಸಿತು. ಕಾಕೋಟುಪರಂಬು ಮೈದಾನದಲ್ಲಿ ನಡೆಯುತ್ತಿರುವ ಟೂರ್ನಿಯಲ್ಲಿ ಶುಕ್ರವಾರ ನೆಲ್ಲಮಕ್ಕಡ ತಂಡ 4-0 ಗೋಲುಗಳಿಂದ ನೆರ್ಪಂಡ ತಂಡವನ್ನು ಸೋಲಿಸಿತು. ನೆಲ್ಲಮಕ್ಕಡ ಪರವಾಗಿ ಸೋಮಣ್ಣ ನಾಲ್ಕು ಗೋಲುಗಳನ್ನು ಗಳಿಸಿ ಜಯದ ರೂವಾರಿ ಎನಿಸಿಕೊಂಡರು. ಕಂಬೇಯಂಡ ತಂಡ 1-0 ಗೋಲಿನಿಂದ ಚೆಯ್ಯಂಡ ತಂಡವನ್ನು ಪರಾಭವಗೊಳಿಸಿತು. ವಿಜೇತ ತಂಡದ ಪರವಾಗಿ ಕಾರ್ಯಪ್ಪ ಗೋಲು ತಂದಿತ್ತರು. ಇತರ ಪಂದ್ಯಗಳಲ್ಲಿ ಕೊಂಡಿರ ತಂಡ 1–0 ರಲ್ಲಿ ಐಚೆಟ್ಟಿರ ವಿರುದ್ಧ; ಚೆಕ್ಕೆರ ತಂಡ 2–0 ರಲ್ಲಿ ಮುಕ್ಕಾಟಿರ ವಿರುದ್ಧ; ಇಟ್ಟಿರ 5–3 ರಲ್ಲಿ ಪೊನ್ನಚೆಟ್ಟಿರ ವಿರುದ್ಧ; ಚೋಯಮಾಡಂಡ 2–1 ರಲ್ಲಿ ಕಂಗಾಂಡ ತಂಡದ ವಿರುದ್ಧ ಜಯಿಸಿದವು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.