ಗೋಮತಿಗೆ ₹ 15 ಲಕ್ಷ ಬಹುಮಾನ ಚೆನ್ನೈ (ಪಿಟಿಐ): ಇತ್ತೀಚೆಗೆ ದೋಹಾದಲ್ಲಿ ನಡೆದಏಷ್ಯನ್‌ ಅಥ್ಲೆಟಿಕ್ಸ್ ಚಾಂಪಿಯನ್‌ಷಿಪ್‌ನಲ್ಲಿ ಚಿನ್ನದ ಪದಕ ಗೆದ್ದಿದ್ದ ತಮಿಳುನಾಡಿನ ಗೋಮತಿ ಮಾರಿಮುತ್ತು ಅವರಿಗೆ ಡಿಎಂಕೆ–ಕಾಂಗ್ರೆಸ್₹ 15 ಲಕ್ಷ ಬಹುಮಾನ ಘೋಷಿಸಿವೆ. ಡಿಎಂಕೆ ₹ 10 ಲಕ್ಷ ಮತ್ತು ಕಾಂಗ್ರೆಸ್‌ ₹ 5 ಲಕ್ಷ ಪ್ರೋತ್ಸಾಹ ಧನವನ್ನು ಗೋಮತಿ ಅವರ ಕ್ರೀಡಾ ಸಾಧನೆಯನ್ನು ಪರಿಗಣಿಸಿ ನೀಡಲಾಗಿದೆ ಎಂದು ಡಿಎಂಕೆ ಅಧ್ಯಕ್ಷ ಎಂ.ಕೆ.ಸ್ಟಾಲಿನ್ ಮತ್ತು ತಮಿಳುನಾಡು ಕಾಂಗ್ರೆಸ್‌ ಅಧ್ಯಕ್ಷ ಕೆ.ಎಸ್‌.ಅಳಗಿರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ರಿಲೇಯಲ್ಲಿ ಬೆಳ್ಳಿಯ ಪದಕ ಜಯಿಸಿದ್ದ ಆರೋಕ್ಯ ರಾಜೀವ್ ಅವರಿಗೂ ಡಿಎಂಕೆ ₹ 5 ಲಕ್ಷ ಬಹುಮಾನ ನೀಡಿದೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.