ಕುಸ್ತಿ: ಅರ್ಜುನ ಹಲಕುರ್ಕಿಗೆ ಚಿನ್ನ ಬೆಂಗಳೂರು: ಲುಧಿಯಾನದಲ್ಲಿ ನಡೆಯುತ್ತಿರುವ ರಾಷ್ಟ್ರೀಯ ಕುಸ್ತಿ ಚಾಂಪಿಯನ್‌ಷಿಪ್‌ನ ಮೂರನೇ ದಿನವಾದ ಭಾನುವಾರ ಕರ್ನಾಟಕದ ಅರ್ಜುನ ಹಲಕುರ್ಕಿ ಚಿನ್ನದ ಪದಕ ಗಳಿಸಿದರು. 55 ಕೆ.ಜಿ. ಗ್ರೀಕೊ ರೋಮನ್ ವಿಭಾಗದಲ್ಲಿ ಅವರು ಈ ಸಾಧನೆ ಮಾಡಿದರು. ಫೈ‌ನಲ್‌ನಲ್ಲಿ ಅವರು ಹರಿಯಾಣದ ಅಜಯ್ ವಿರುದ್ಧ 8-0 ಅಂತರದ ಗೆಲುವು ಸಾಧಿಸಿದರು. ಸರ್ವಿಸಸ್ ಕ್ರೀಡಾ ನಿಯಂತ್ರಣ ಮಂಡಳಿ (ಎಸ್‌ಎಸ್‌ಸಿಬಿ) ಪ್ರತಿನಿಧಿಸುತ್ತಿರುವ ಅರ್ಜುನ, ದಾವಣಗೆರೆ ಕ್ರೀಡಾನಿಲಯದಲ್ಲಿ ಅಭ್ಯಾಸ ಮಾಡುತ್ತಿದ್ದಾರೆ. ಭಾನುವಾರದ ಜಯದೊಂದಿಗೆ ಅವರು ಸ್ಯಾಫ್ ಕೂಟಕ್ಕೆ ಅರ್ಹತೆಯನ್ನೂ ಗಳಿಸಿದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.