ಬಿಎಫ್‌ಸಿಗೆ ಗೆಲುವು ಬೆಂಗಳೂರು: ಬೆಂಗಳೂರು ಫುಟ್‌ಬಾಲ್‌ ಕ್ಲಬ್‌ (ಬಿಎಫ್‌ಸಿ) ತಂಡದವರು ಗೋವಾದ ಮಡಗಾಂವ್‌ನಲ್ಲಿ ನಡೆಯುತ್ತಿರುವ ಹೀರೊ ಸಬ್‌ಜೂನಿಯರ್‌ ಲೀಗ್‌ನ ಪಂದ್ಯದಲ್ಲಿ ಗೆದ್ದಿದ್ದಾರೆ. ಸೋಮವಾರ ನಡೆದ ‘ಬಿ’ ಗುಂಪಿನ ಪೈಪೋಟಿಯಲ್ಲಿ 13 ವರ್ಷದೊಳಗಿನವರ ಬಿಎಫ್‌ಸಿ ತಂಡ 3–1 ಗೋಲುಗಳಿಂದ ಸಲಗಾಂವ್ಕರ್‌ ತಂಡವನ್ನು ಮಣಿಸಿತು. ಚಂದನ್‌ ಬಿಜು, ವಿನೀತ್‌ ವೆಂಕಟೇಶ್‌ ಮತ್ತು ರೋಹಿತ್‌ ನೇಗಿ ಅವರು ತಲಾ ಒಂದು ಗೋಲು ಹೊಡೆದರು. ಬುಧವಾರ ನಡೆಯುವ ಹೋರಾಟದಲ್ಲಿ ಬಿಎಫ್‌ಸಿ, ಪರಪ್ಪುರ್‌ ಎಫ್‌ಸಿ ಎದುರು ಸೆಣಸಲಿದೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.