ಎಸ್‌ಎಫ್‌ಐ ಅಧ್ಯಕ್ಷರಾಗಿ ಜಯಪ್ರಕಾಶ್‌ ಆಯ್ಕೆ ಚೆನ್ನೈ (ಪಿಟಿಐ): ತಮಿಳುನಾಡಿನ ಆರ್‌.ಎನ್‌.ಜಯಪ್ರಕಾಶ್‌ ಅವರು ಭಾರತ ಈಜು ಫೆಡರೇಷನ್‌ನ (ಎಸ್‌ಎಫ್‌ಐ) ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಶುಕ್ರವಾರ ನಡೆದ ಎಸ್‌ಎಫ್‌ಐ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ವಿವಿಧ ಪದಾಧಿಕಾರಿಗಳನ್ನು ಅವಿರೋಧವಾಗಿ ಆಯ್ಕೆ ಮಾಡಲಾಯಿತು. ಜಯಪ್ರಕಾಶ್‌ ಅವರು ಹಿಂದಿನ ಅವಧಿಯಲ್ಲಿ ಉಪಾಧ್ಯಕ್ಷರಾಗಿ ಕೆಲಸ ಮಾಡಿದ್ದರು. ಕರ್ನಾಟಕದ ಮೋಹನ್‌ ಸತೀಶ್‌ ಕುಮಾರ್‌ ಅವರು ಜಂಟಿ ಕಾರ್ಯದರ್ಶಿಯಾಗಿ ಆಯ್ಕೆಯಾಗಿದ್ದಾರೆ. ಇವರ ಅಧಿಕಾರಾವಧಿ ನಾಲ್ಕು ವರ್ಷ. ಗುಜರಾತ್‌ನ ಚೋಕ್ಸಿ ಮಂಡಲ್‌ ಮತ್ತು ತೆಲಂಗಾಣದ ಮೇಕಾಲ ರಾಮಕೃಷ್ಣ ಅವರು ಕ್ರಮವಾಗಿ ಮಹಾ ಕಾರ್ಯದರ್ಶಿ ಮತ್ತು ಖಜಾಂಚಿಯಾಗಿ ಕೆಲಸ ಮಾಡಲಿದ್ದಾರೆ. ಬಾಲರಾಜ್‌ ಶರ್ಮಾ (ಪಂಜಾಬ್‌), ರಾಜೀವ್‌ ಸುಕುಮಾರನ್‌ ನಾಯರ್‌ (ಕೇರಳ), ಕಮಲೇಶ್‌ ಡಿ ನಾನಾವತಿ (ಗುಜರಾತ್‌), ಪೀಯೂಷ್‌ ಶರ್ಮಾ (ಮಧ್ಯಪ್ರದೇಶ) ಮತ್ತು ಅನಿಲ್ ವ್ಯಾಸ್‌ (ರಾಜಸ್ಥಾನ) ಅವರು ಉಪಾಧ್ಯಕ್ಷರುಗಳಾಗಿ ಕಾರ್ಯನಿರ್ವಹಿಸಲಿದ್ದಾರೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.