ನೆಟ್‌ಬಾಲ್: ನವೀನ್‌, ಸಿಂಧುಗೆ ಸಾರಥ್ಯ ಬೆಂಗಳೂರು: ಎನ್‌.ನವೀನ್‌ ಕುಮಾರ್‌ ಮತ್ತು ಜಿ.ಸಿಂಧು ಅವರು ಮುಂಬರುವ ಫೆಡರೇಷನ್‌ ಕಪ್‌ ರಾಷ್ಟ್ರೀಯ ನೆಟ್‌ಬಾಲ್‌ ಚಾಂಪಿಯನ್‌ಷಿಪ್‌ನಲ್ಲಿ ಕ್ರಮವಾಗಿ ಕರ್ನಾಟಕದ ಪುರುಷರ ಮತ್ತು ಮಹಿಳಾ ತಂಡಗಳನ್ನು ಮುನ್ನಡೆಸಲಿದ್ದಾರೆ. ಫೆಡರೇಷನ್‌ ಕಪ್‌, ಇದೇ 28ರಿಂದ 31ರವರೆಗೆ ‍ಪಂಜಾಬ್‌ನಲ್ಲಿ ನಡೆಯಲಿದೆ. ತಂಡಗಳು ಇಂತಿವೆ: ಪುರುಷರು: ಎನ್‌.ನವೀನ್ ಕುಮಾರ್‌ (ನಾಯಕ), ರಮೇಶ್ ಎ.ಬಡಗಿ (ಉಪ ನಾಯಕ), ವಿನಯ್‌ ಎಸ್‌.ಶೆಟ್ಟಿ, ಸುಗನ್‌, ಶಮಂತ್‌ ಕುಮಾರ್‌ ಶೆಟ್ಟಿ, ಎಸ್‌.ವರುಣ್‌, ಯು.ಆಕಾಶ್‌, ಎಂ.ಸಂತೋಷ್‌ ನಾಯಕ್‌, ಭರತ್‌ ಎಂ.ಗುಲಗಂಜಿ, ಜಿ.ಎ.ಸುರೇಶ್‌, ಪಿ.ಜಗದೀಶ್‌ ಮತ್ತು ಆಕಾಶ್‌. ಕೋಚ್‌: ಎ.ಪವನ್‌ ಕುಮಾರ್‌. ಮಹಿಳೆಯರು: ಜಿ.ಸಿಂಧು (ನಾಯಕಿ), ಆರ್‌.ರೋಷನಿ (ಉಪ ನಾಯಕಿ), ಎಲ್‌.ಜಿ.ನಂದಿನಿ, ಶ್ರೇಯಾ, ಎಸ್‌.ದೀ‍ಪಿಕಾ, ಟಿ.ಆರ್‌.ದೀಪಾ, ಬಿ.ಆರ್‌.ಸುರಭಿ, ಕೆ.ನಂದಿನಿ, ಎಚ್‌.ಮನಸ್ವಿ, ಎಸ್‌.ಶಿವಲೀಲಾ, ವಿ.ಹರ್ಷಿಣಿ ಮತ್ತು ಎಂ.ಪೂಜಾ. ಕೋಚ್‌: ವಿನು ಸ್ಯಾಮ್‌. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.