ಬಾಕ್ಸಿಂಗ್‌: ಸೆಮಿಗೆ ಮೇರಿ ಗುವಾಹಟಿ: ಆರು ಬಾರಿಯ ವಿಶ್ವ ಚಾಂಪಿಯನ್‌ ಎಂ.ಸಿ.ಮೇರಿ ಕೋಮ್‌ ಅವರು ಇಂಡಿಯಾ ಓಪನ್ ಬಾಕ್ಸಿಂಗ್ ಟೂರ್ನಿಯಲ್ಲಿ ಸೆಮಿಫೈನಲ್‌ಗೆ ಲಗ್ಗೆ ಇಟ್ಟಿದ್ದಾರೆ. ಕರಮ್‌ವೀರ್‌ ನಬೀನ್ ಚಂದ್ರ ಬೋರ್ದೊಲಾಯ್‌ ಒಳಾಂಗಣ ಕ್ರೀಡಾಂಗಣದಲ್ಲಿ ಮಂಗಳವಾರ ನಡೆದ ಮಹಿಳೆಯರ 51 ಕೆ.ಜಿ. ವಿಭಾಗದ ಮೊದಲ ಸುತ್ತಿನ ಪೈಪೋಟಿಯಲ್ಲಿ ಮೇರಿ 5–0ಯಿಂದ ನೇ‍ಪಾಳದ ಮಾಲಾ ರಾಯ್‌ ಅವರನ್ನು ಪರಾಭವಗೊಳಿಸಿದರು. ಇದೇ ಮೊದಲ ಸಲ 51 ಕೆ.ಜಿ. ವಿಭಾಗದಲ್ಲಿ ರಿಂಗ್‌ಗೆ ಇಳಿದಿದ್ದ ಮೇರಿ, ಬಲಿಷ್ಠ ಪಂಚ್‌ಗಳ ಮೂಲಕ ಎದುರಾಳಿಯನ್ನು ಹೈರಾಣಾಗಿಸಿದರು. 60 ಕೆ.ಜಿ. ವಿಭಾಗದಲ್ಲಿ ಕಣದಲ್ಲಿದ್ದ ಸರಿತಾ ದೇವಿ ಕೂಡಾ ನಾಲ್ಕರ ಘಟ್ಟ ಪ್ರವೇಶಿಸಿದರು. ಸರಿತಾ 5–0ಯಿಂದ ಪ್ರೀತಿ ಬೇನಿವಾಲಾ ಅವರನ್ನು ಸೋಲಿಸಿದರು. ಸ್ಥಳೀಯ ಆಟಗಾರ್ತಿ ಅಂಕುಶಿತಾ ಬೋರೊ 64 ಕೆ.ಜಿ. ವಿಭಾಗದ ಪಂದ್ಯದಲ್ಲಿ 4–1ಯಿಂದ ಲಲಿತಾ ಅವರನ್ನು ಮಣಿಸಿದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.