ಕಬಡ್ಡಿ: ಫೈನಲ್‌ಗೆ ಪುಣೆ ಪ್ರೈಡ್‌ ಬೆಂಗಳೂರು: ಸಂಘಟಿತ ಪ್ರದರ್ಶನ ನೀಡಿದಪುಣೆ ಪ್ರೈಡ್‌ ತಂಡವು ಚೆನ್ನೈ ಚಾಲೆಂಜರ್ಸ್‌ ತಂಡವನ್ನು ಸೆಮಿಫೈನಲ್ಸ್‌ನಲ್ಲಿ ಮಣಿಸಿ ಚೊಚ್ಚಲ ಆವೃತ್ತಿಯ ಇಂಡೊ ಇಂಟರ್‌ನ್ಯಾಷನಲ್‌ ಪ್ರೀಮಿಯರ್‌ ಕಬಡ್ಡಿ ಲೀಗ್‌ ಟೂರ್ನಿಯ ಫೈನಲ್‌ ತಲುಪಿದೆ. ಇಲ್ಲಿನ ಶ್ರೀ ಕಂಠೀರವ ಒಳಾಂಗಣ ಕ್ರೀಡಾಂಗಣದಲ್ಲಿ ಸೋಮವಾರ ನಡೆದ ಪಂದ್ಯದಲ್ಲಿ ಪುಣೆ ತಂಡ 39-34 ಪಾಯಿಂಟ್‌ಗಳಿಂದ ಜಯಿಸಿ ಪ್ರಶಸ್ತಿ ಸುತ್ತಿಗೆ ಲಗ್ಗೆಯಿಟ್ಟಿತು. ಪಂದ್ಯದಲ್ಲಿ ಪುಣೆ ತಂಡದ ಪರ ಅಮರ್‌ಜೀತ್‌ ಸಿಂಗ್‌ 13 ಪಾಯಿಂಟ್‌ ಗಳಿಸುವ ಮೂಲಕ ಗಮನ ಸೆಳೆದರೆ, ಪಂದ್ಯದ ಫಲಿತಾಂಶ ಬದಲಾಯಿಸಿದ ವೆಂಕಟೇಶ್‌ 11 ಪಾಯಿಂಟ್‌ ಗಳಿಸುವ ಮೂಲಕ ಪಂದ್ಯದ ಅತ್ಯುತ್ತಮ ಪ್ರೊಡಕ್ಟೀವ್‌ ರೇಡರ್‌ ಎನಿಸಿದರು. ಚೆನ್ನೈ ಪರ ಏಕಾಂಗಿ ಹೋರಾಟ ನಡೆಸಿದ ರೇಡರ್‌ ಇಳಯರಾಜ 16 ಪಾಯಿಂಟ್‌ ಗಳಿಸಿದರಾದರೂ ಗೆಲುವು ಚಾಲೆಂಜರ್ಸ್‌ ಕೈ ಹಿಡಿಯಲಿಲ್ಲ. ಫೈನಲ್‌ ಪಂದ್ಯ ಮಂಗಳವಾರ ನಡೆಯಲಿದೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.