ಜಿಮ್ನಾಸ್ಟಿಕ್‌ ಪಾತ್ರಾಗೆ 7ನೇ ಸ್ಥಾನ ನವದೆಹಲಿ (ಪಿಟಿಐ): ಭಾರತದ ಜಿಮ್ನಾಸ್ಟಿಕ್‌ ತಾರೆ ರಾಕೇಶ್‌ ಕುಮಾರ್‌ ಪಾತ್ರಾ ಅವರು ಎಫ್‌ಐಜಿ ವಿಶ್ವಕಪ್‌ ಟೂರ್ನಿಯಲ್ಲಿಏಳನೇ ಸ್ಥಾನಕ್ಕೆ ತೃಪ್ತಿಪಟ್ಟರು. ಸ್ಲೋವೆನಿಯಾದ ಕೋಪರ್‌ನಲ್ಲಿ ನಡೆಯುತ್ತಿರುವ ಟೂರ್ನಿಯ ಪ್ಯಾರಲಲ್ಸ್ ಬಾರ್ಸ್‌ ವಿಭಾಗದಲ್ಲಿ ಅವರು ಸ್ಪರ್ಧಿಸಿದ್ದರು. ಒಟ್ಟು 13.650 ಪಾಯಿಂಟ್‌ ಕಲೆಹಾಕಿದ ಪಾತ್ರಾ, ಎಂಟು ಸ್ಪರ್ಧಿಗಳಿದ್ದ ಫೈನಲ್ಸ್‌ನಲ್ಲಿ ಏಳನೇ ಸ್ಥಾನ ಪಡೆದರು. ಬ್ರಿಟನ್‌ನ ಫ್ರಾಂಕ್‌ ಬೈನ್ಸ್‌ ಮೊದಲ ಸ್ಥಾನ ತಮ್ಮದಾಗಿಸಿಕೊಂಡರು. ಕಜಕಿಸ್ತಾನದ ಮಿಲಾದ್‌ ಕರೀಮಿ ದ್ವಿತೀಯ ಸ್ಥಾನ ಪಡೆದರೆ, ಮೂರನೇ ಸ್ಥಾನ ಸೈಪ್ರಸ್‌ನ ಇಲಿಯಾಸ್‌ ಜಾರ್ಜಿಯು ಪಾಲಾಯಿತು. ಅರ್ಹತಾ ಸುತ್ತಿನಲ್ಲಿ ಎಂಟನೇ ಸ್ಥಾನ ಗಳಿಸಿದ ರಾಕೇಶ್‌ಕುಮಾರ್‌ ಪ್ಯಾರಲಲ್‌ ಬಾರ್ಸ್‌ನ ಫೈನಲ್ಸ್‌ಗೆ ಪ್ರವೇಶಿಸಿದ್ದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.