ಸ್ನೂಕರ್ : ಬೆಂಗಳೂರು ಕ್ಲಬ್‌ಗೆ ಜಯ ಬೆಂಗಳೂರು: ಬೆಂಗಳೂರು ಕ್ಲಬ್ ತಂಡವು ಚಂದ್ರಾ ಭಾಟಿಯಾ ಅಂತರ ಕ್ಲಬ್ ಸ್ನೂಕರ್ ಚಾಂಪಿಯನ್‌ಷಿಪ್‌ನಲ್ಲಿ ಕೆಎಸ್‌ಬಿಎ ‘ಬಿ’ ತಂಡದ ವಿರುದ್ಧ ಜಯಿಸಿತು. ಬೆಂಗಳೂರು ಕ್ಲಬ್‌ 761–617ರಿಂದ ಕೆಎಸ್‌ಬಿಎ ಬಿ ವಿರುದ್ಧ; ಕೆಜಿಎಫ್‌ನ ಬೆಮೆಲ್ ಕ್ಲಬ್ 745–722 ರಿಂದ ಸೌತ್ ವೆಸ್ಟರ್ನ್‌ ರೈಲ್ವೆ ವಿರುದ್ಧ; ಇಂಡಿಯನ್ ಜಿಮ್ಖಾನಾ ಕ್ಲಬ್ 794–600 ರಿಂದ ತುಮಕೂರು ಟೌನ್ ಕ್ಲಬ್ ವಿರುದ್ಧ; ಸೆಂಚುರಿ ಕ್ಲಬ್ ಸಿ 724–714ರಿಂದ ಲೇಡಿಸ್ ಟೀಮ್ ವಿರುದ್ಧ ಜಯಿಸಿದವು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.