ಜೊಕೊವಿಚ್‌, ಬಾರ್ಟಿ ಕ್ವಾರ್ಟರ್‌ ಫೈನಲ್‌ಗೆ ಪ್ಯಾರಿಸ್ (ರಾಯಿಟರ್ಸ್‌): ಅಗ್ರ ಶ್ರೇಯಾಂಕಿತ ನೊವಾಕ್‌ ಜೊಕೊವಿಚ್‌ ಫ್ರೆಂಚ್‌ ಓಪನ್‌ ಟೆನಿಸ್‌ ಟೂರ್ನಿಯಲ್ಲಿ ಗೆಲುವಿನ ಓಟ ಮುಂದುವರಿಸಿದ್ದಾರೆ. ಸೋಮವಾರ ನಡೆದ ಪಂದ್ಯದಲ್ಲಿ ಜರ್ಮನಿಯ ಜಾನ್‌ ಲೆನ್ನಾರ್ಡ್‌ ಸ್ಟ್ರಫ್‌ ವಿರುದ್ಧ ಜಯ ಸಾಧಿಸಿದ ಅವರು ಕ್ವಾರ್ಟರ್‌ಫೈನಲ್‌ಗೆ ಲಗ್ಗೆ ಇರಿಸಿದರು. 6–3, 6–2, 6–2 ಸೆಟ್‌ಗಳಿಂದ ಗೆದ್ದ ಜೊಕೊವಿಚ್‌ ಟೂರ್ನಿ ಯಲ್ಲಿ ಸತತ 10ನೇ ಬಾರಿ ಎಂಟರಘಟ್ಟ ತಲುಪಿದ ಸಾಧನೆ ಮಾಡಿದರು. ಫಿಲಿಪ್‌ ಚಾಟ್ರಿಯರ್‌ ಕ್ರೀಡಾಂಗಣ ದಲ್ಲಿ ನಡೆದ ಪಂದ್ಯದ ಆರಂಭದಲ್ಲಿ ಸ್ಪ್ರಫ್‌ ಅಲ್ಪ ಪ್ರತಿ ರೋಧ ತೋರಿದರು. ಆದರೂ ಜೊಕೊವಿಚ್‌ ಅವರಿಂದ ಜಯ ಕಸಿದುಕೊಳ್ಳಲು ಸಾಧ್ಯವಾಗಲಿಲ್ಲ. ಮಹಿಳಾ ಸಿಂಗಲ್ಸ್‌ ವಿಭಾಗದಲ್ಲಿ ಆಸ್ಟ್ರೇಲಿಯಾದ ಆ್ಯಷ್ಲೆ ಬಾರ್ಟಿ ಕ್ವಾರ್ಟರ್‌ ಫೈನಲ್ ತಲುಪಿದರು. ಪ್ರಿಕ್ವಾರ್ಟರ್‌ ಫೈನಲ್‌ನಲ್ಲಿ ಬಾರ್ಟಿ, ಅಮೆರಿಕಾದ ಸೋಫಿಯಾ ಕೆನಿನ್‌ ಅವರನ್ನು ಸೋಲಿಸಿದರು. ಈ ವರ್ಷದ ಆಸ್ಟ್ರೇಲಿಯನ್‌ ಓಪನ್‌ ಟೂರ್ನಿಯಲ್ಲೂ ಅವರು ಎಂಟರ ಘಟ್ಟಕ್ಕೆ ಲಗ್ಗೆಯಿಟ್ಟಿದ್ದರು. ಪಂದ್ಯದಲ್ಲಿ 6–3, 3–6, 6–0 ಸೆಟ್‌ಗಳಿಂದ ಕೆನಿನ್‌, ಬಾರ್ಟಿಗೆ ಶರಣಾದರು. ಮತ್ತೊಂದು ಪಂದ್ಯದಲ್ಲಿ ಅಮೆ ರಿಕದ ಮ್ಯಾಡಿಸನ್‌ ಕೀಸ್ ಅವರು ಜೆಕ್‌ ಗಣರಾಜ್ಯದ ಕ್ಯಾಥರಿನಾ ಸಿನಿಯಾಕೊವಾ ಎದುರು 6–2, 6–4 ಸೆಟ್‌ಗಳಿಂದ ಗೆದ್ದರು. ಮುಂದಿನ ಪಂದ್ಯದಲ್ಲಿ ಮ್ಯಾಡಿಸನ್‌ ಮತ್ತು ಬಾರ್ಟಿ ಮುಖಾಮುಖಿಯಾಗಲಿದ್ದಾರೆ. ಭಾನುವಾರ ರಾತ್ರಿ ನಡೆದ ಪುರುಷರ ಸಿಂಗಲ್ಸ್‌ ಪಂದ್ಯದಲ್ಲಿ ಗ್ರೀಸ್‌ನ ಸಿಸಿಪಸ್‌ ಅವರು ಸ್ಟ್ಯಾನ್‌ ವಾವ್ರಿಂಕಾ ಎದುರು 7–6 (8/6), 5–7, 6–4, 3–6, 8–6 ಸೆಟ್‌ಗಳ ಮ್ಯಾರಥಾನ್‌ ಪಂದ್ಯದಲ್ಲಿ ಸೋತರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.