ಮಯೂರೇಷ್‌ ಜಾಧವ್‌ ಪ್ರಥಮ ಬೆಂಗಳೂರು: ಇಲ್ಲಿಯ ಕೆನ್ಸಿಂಗ್ಟನ್‌ ಈಜುಕೊಳದಲ್ಲಿ ನಡೆದ ರಾಜ್ಯ ಸಬ್‌ ಜೂನಿಯರ್‌ ಹಾಗೂ ಜೂನಿಯರ್‌ ಡೈವಿಂಗ್‌ ಚಾಂಪಿಯನ್‌ಷಿಪ್‌ನ ಮೊದಲ ದಿನವಾದ ಮಂಗಳವಾರ ಸ್ಪ್ರಿಂಗ್‌ ಬೋರ್ಡ್‌ ಡೈವಿಂಗ್‌ ಬಾಲಕರ ಮೂರನೇ ಗುಂಪು ವಿಭಾಗದಲ್ಲಿ ಮಯೂರೇಶ್‌ ಜಾಧವ್‌ ಪ್ರಥಮ, ತೇಜಸ್ವರ್‌ ಎಸ್‌ ದ್ವಿತೀಯ ಹಾಗೂ ಹರಿಕೃಷ್ಣ ಎಸ್‌. ತೃತೀಯ ಸ್ಥಾನ ಪಡೆದರು. ಬಾಲಕಿಯರ ವಿಭಾಗದ ಮೂರನೇ ಗುಂಪು ಸ್ಪರ್ಧೆಯಲ್ಲಿ ಸಂಜನಾ ಆರ್‌. ಕಟಗೆನ್ನವರ್‌ ಪ್ರಥಮ ಸ್ಥಾನ ಗಳಿಸಿದರು. ಸ್ಪ್ರಿಂಗ್‌ ಬೋರ್ಡ್‌ ಡೈವಿಂಗ್‌ ಬಾಲಕರ ಎರಡನೇ ಗುಂಪು ವಿಭಾಗದಲ್ಲಿ ಆದಿತ್ಯ ದಿನೇಶ್‌ ರಾವ್‌ ಪ್ರಥಮ, ಸಾಹಿಲ್‌ ವಿ ವರ್ಣೇಕರ್‌ ದ್ವಿತೀಯ ಹಾಗೂ ಚಾಣಕ್ಯ ಎಸ್‌ ಎಮ್‌ ತೃತೀಯ ಸ್ಥಾನ ಪಡೆದರು. ಬಾಲಕಿಯರ ಎರಡನೇ ಗುಂಪು ವಿಭಾಗದಲ್ಲಿ ಅದಿತಿ ದಿನೇಶ್‌ ರಾವ್‌ ಪ್ರಥಮ, ಶಾಕ್ಯನಾ ರಾವ್‌ ದ್ವಿತೀಯ ಹಾಗೂ ಮೃನ್ಮಯಿ ಮೋಹಿತೆ ತೃತೀಯ ಸ್ಥಾನ ಗಳಿಸಿದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.