ಮೋಟರ್‌ ರೇಸಿಂಗ್‌: ಡಿ ಗ್ರಾಸಿಗೆ ಪ್ರಶಸ್ತಿ ಬರ್ಲಿನ್‌: ಬ್ರೆಜಿಲ್‌ನ ಲೂಕಾಸ್‌ ಡಿ ಗ್ರಾಸಿ ಅವರು ’ಫಾರ್ಮುಲಾ ಇ’ಯಬರ್ಲಿನ್‌ ಇ ಪ್ರಿಕ್ಸ್‌ ಸ್ಪರ್ಧೆಯ ಚಾಂಪಿಯನ್‌ ಆಗಿದ್ದಾರೆ. ಇದು ಅವರು ಈ ಋತುವಿನಲ್ಲಿ ಸಾಧಿಸಿದ ಎರಡನೇ ಜಯವಾಗಿದೆ. ಭರವಸೆ ಮೂಡಿಸಿದ್ದಟೆಕಿತಾಹ್‌ ತಂಡದ ಫ್ರಾನ್ಸ್‌ನ ಜೀನ್ ಎರಿಕ್‌ ವರ್ನೆ ಮೂರನೇ ಸ್ಥಾನಕ್ಕೆ ತೃಪ್ತಿಪಟ್ಟರು. ಮೊದಲ ಸ್ಥಾನಿಯಾಗಿ ರೇಸ್‌ ಆರಂಭಿಸಿದ್ದ ನಿಸಾನ್‌ ತಂಡದ ಸ್ವಿಟ್ಜರ್ಲೆಂಡ್‌ ದೇಶದ ಸೆಬಾಸ್ಟಿಯನ್‌ ಬುಯೆಮಿ ಎರಡನೇ ಸ್ಥಾನ ಗಳಿಸಿದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.