ಸುದೀರ್‌ಮನ್‌ ಕಪ್‌: ಫೈನಲ್‌ಗೆ ಚೀನಾ ನ್ಯಾನಿಂಗ್‌: ಆತಿಥೇಯ ಚೀನಾ ತಂಡ 11ನೇ ಸುದೀರ್‌ಮನ್‌ ಕಪ್‌ ಬ್ಯಾಡ್ಮಿಂಟನ್‌ ಪ್ರಶಸ್ತಿ ಹೊಸ್ತಿಲಿಗೆ ಬಂದು ನಿಂತಿದೆ. ಶನಿವಾರ ಮಿಶ್ರ ತಂಡ ವಿಭಾಗದಲ್ಲಿ ಥಾಯ್ಲೆಂಡ್‌ ತಂಡವನ್ನು ಚೀನಾ ದಯನೀಯವಾಗಿ ಸೋಲಿಸಿತು. ರವಿವಾರ ಫೈನಲ್‌ ಪಂದ್ಯ ನಡೆಯಲಿದೆ. ಥಾಯ್ಲೆಂಡ್ ತಂಡವನ್ನು 3–0 ಅಂಕಗಳ ಅಂತರದಿಂದ ಮಣಿಸಿದ ಚೀನಾ, ರವಿವಾರ ಅಂತಿಮ ಪಂದ್ಯದಲ್ಲಿ ಅಗ್ರ ಶ್ರೇಯಾಂಕದ ಜಪಾನ್‌ ತಂಡವನ್ನು ಎದುರಿಸಲಿದೆ. ವಿಶ್ವ ಕ್ರಮಾಂಕದಲ್ಲಿ ಮೊದಲ ಸ್ಥಾನದಲ್ಲಿರುವ ಚೀನಾದ ಮಿಶ್ರ ಡಬಲ್ಸ್‌ ಜೋಡಿ ಜೆಂಗ್‌ ಸಿವೆಯಿ ಹಾಗೂ ಹುವಾಂಗ್ ಯಾಕಿಯೊಂಗ್‌ ಮತ್ತು ಪುರುಷರ ಸಿಂಗಲ್ಸ್‌ನಲ್ಲಿ ಶಿ ಯುಕಿ ಥಾಯ್ಲೆಂಡ್‌ ಸ್ಪರ್ಧಿಗಳ ವಿರುದ್ಧ ಜಯದ ನಗೆ ಬೀರಿದರು. ಪುರುಷರ ಡಬಲ್ಸ್‌ನಲ್ಲಿಯೂ ವಿಶ್ವ ಚಾಂಪಿಯನ್‌ ಚೀನಾದ ಜೋಡಿ ಲೀ ಜುನಹುಯ್‌ ಹಾಗೂ ಲಿವ್‌ ಯುಚೆನ್‌ ಪಾರಮ್ಯ ಮೆರೆಯಿತು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.