ಬಿಎಸಿ ಉಪಾಧ್ಯಕ್ಷರಾಗಿ ಹಿಮಾಂತ ಆಯ್ಕೆ ನವದೆಹಲಿ: ಭಾರತದ ಹಿರಿಯ ಕ್ರೀಡಾ ಆಡಳಿತಗಾರ ಹಿಮಾಂತ ಬಿಸ್ವಾ ಶರ್ಮಾ ಅವರು ಬ್ಯಾಡ್ಮಿಂಟನ್‌ ಏಷ್ಯಾ ಕೌನ್ಸಿಲ್‌ನ (ಬಿಎಸಿ) ಉ‍ಪಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಭಾನುವಾರ ನಡೆದ ಚುನಾವಣೆಯಲ್ಲಿ ಅವರು ಒಟ್ಟು 35 ಮತಗಳನ್ನು ಪಡೆದರು.50 ವರ್ಷ ವಯಸ್ಸಿನ ಹಿಮಾಂತ, ಭಾರತ ಬ್ಯಾಡ್ಮಿಂಟನ್‌ ಸಂಸ್ಥೆಯ (ಬಿಎಐ) ಅಧ್ಯಕ್ಷರಾಗಿದ್ದಾರೆ. ಓಮರ್‌ ರಶೀದ್‌, ಬ್ಯಾಡ್ಮಿಂಟನ್‌ ಏಷ್ಯಾ ಅಭಿವೃದ್ಧಿ ಸಮಿತಿಯ ಉ‍ಪಾಧ್ಯಕ್ಷರಾಗಿ ಆಯ್ಕೆಯಾಗಿದ್ದು, ಸುಧಾಕರ್‌ ವೆಮುರಿ ಅವರು ಬಿಎಸಿ ತಾಂತ್ರಿಕ ಸಮಿತಿಯ ಉಪಾಧ್ಯಕ್ಷರಾಗಿ ಕೆಲಸ ಮಾಡಲಿದ್ದಾರೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.