ಶೂಟಿಂಗ್‌: ಅಪೂರ್ವಿಗೆ ಚಿನ್ನ ನವದೆಹಲಿ: ಭಾರತದ ಅಪೂರ್ವಿ ಚಾಂಡೇಲಾ ಐಎಸ್‌ಎಸ್‌ಎಫ್‌ ರೈಫಲ್/ಪಿಸ್ತೂಲು ವಿಶ್ವಕಪ್‌ನಲ್ಲಿ ಭಾನುವಾರ ಚಿನ್ನ ಗೆದ್ದರು. ಮ್ಯೂನಿಚ್‌ನಲ್ಲಿ ನಡೆಯುತ್ತಿರುವ ಟೂರ್ನಿಯ 10 ಮೀಟರ್‌ ಏರ್ ರೈಫಲ್ ವಿಭಾಗದಲ್ಲಿ ಅವರಿಗೆ ಚೀನಾದ ವಾಂಗ್ ಲುಯಾವೊ ಅವರಿಂದ ತೀವ್ರ ಪೈಪೋಟಿ ಎದುರಾಗಿತ್ತು. ಆದರೆ ಪಟ್ಟುಬಿಡದ ಜೈಪುರದ ಶೂಟರ್ 251 ಸ್ಕೋರ್ ಗಳಿಸಿ ಚಿನ್ನ ತಮ್ಮದಾಗಿಸಿಕೊಂಡರು. ಎದುರಾಳಿ 250.8 ಸ್ಕೋರ್ ಗಳಿಸಿದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.