ಟಿಟಿ: ಆಕಾಶ್, ಕರುಣಾಗೆ ಪ್ರಶಸ್ತಿ ಬೆಂಗಳೂರು: ಆಕಾಶ್ ಕೆ.ಜೆ ಮತ್ತು ಕರುಣಾ, ಇಲ್ಲಿ ನಡೆದ ರಾಜ್ಯ ರ‍್ಯಾಂಕಿಂಗ್ ಟೇಬಲ್ ಟೆನಿಸ್ ಟೂರ್ನಿಯಲ್ಲಿ ಕ್ರಮವಾಗಿ ಸಬ್‌ ಜೂನಿಯರ್ ಬಾಲಕ ಮತ್ತು ಬಾಲಕಿಯರ ವಿಭಾಗದ ಪ್ರಶಸ್ತಿ ಗೆದ್ದರು. ಮಲ್ಲೇಶ್ವರಂ ಅಸೋಸಿಯೇಷನ್‌ ಆಯೋಜಿಸಿದ್ದ ಟೂರ್ನಿಯ ಫೈನಲ್‌ನಲ್ಲಿ ಆಕಾಶ್‌ 12–10, 9–11, 11–8, 11–5ರಲ್ಲಿ ಸುಜನ್ ಭಾರದ್ವಾಜ್‌ ಎದುರು ಗೆದ್ದರು. ಕರುಣಾ, ರೈನಾ ನರ ಅವರನ್ನು 11–5, 11–5, 11–10ರಲ್ಲಿ ಸೋಲಿಸಿದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.