ಟಿ.ಟಿ: ಸುಜನ್‌, ಯಶಸ್ವಿನಿಗೆ ಪ್ರಶಸ್ತಿ ಬೆಂಗಳೂರು: ಸುಜನ್ ಭಾರದ್ವಾಜ್‌ ಮತ್ತು ಯಶಸ್ವಿನಿ ಅವರು ಮಲ್ಲೇಶ್ವರಂ ಸಂಸ್ಥೆ ಆಶ್ರಯದ ರಾಜ್ಯ ರ‍್ಯಾಂಕಿಂಗ್‌ ಟೇಬಲ್‌ ಟೆನಿಸ್‌ ಟೂರ್ನಿಯಲ್ಲಿ ಕ್ರಮವಾಗಿ ಜೂನಿಯರ್‌ ಬಾಲಕ ಮತ್ತು ಬಾಲಕಿಯರ ಸಿಂಗಲ್ಸ್‌ ವಿಭಾಗಗಳಲ್ಲಿ ಪ್ರಶಸ್ತಿ ಜಯಿಸಿದ್ದಾರೆ. ಮಲ್ಲೇಶ್ವರಂ ಸಂಸ್ಥೆಯ ಅಂಗಳದಲ್ಲಿ ಸೋಮವಾರ ನಡೆದ ಫೈನಲ್‌ನಲ್ಲಿ ಸುಜನ್‌ 12–10, 12–10, 11–7, 11–4ರಲ್ಲಿ ಕೆ.ಜೆ.ಆಕಾಶ್‌ ಅವರನ್ನು ಸೋಲಿಸಿದರು. ಸೆಮಿಫೈನಲ್ ಪಂದ್ಯಗಳಲ್ಲಿ ಆಕಾಶ್‌ 11–8, 13–11, 9–11, 11–7, 11–8ರಲ್ಲಿ ಜೆ.ತೇಜಸ್‌ ಎದುರೂ, ಸುಜನ್‌ 9–11, 11–8, 8–11, 11–3, 11–9, 11–6ರಲ್ಲಿ ಪಿ.ವಿ.ಶ್ರೀಕಾಂತ್‌ ಮೇಲೂ ಗೆದ್ದಿದ್ದರು. ಬಾಲಕಿಯರ ಸಿಂಗಲ್ಸ್‌ ಫೈನಲ್‌ನಲ್ಲಿ ಯಶಸ್ವಿನಿ 12–10, 5–11, 11–8, 11–8, 11–5ರಲ್ಲಿ ಜಿ.ಕರುಣಾ ಅವರನ್ನು ಮಣಿಸಿದರು. ನಾಲ್ಕರ ಘಟ್ಟದ ಪೈಪೋಟಿಗಳಲ್ಲಿ ಕರುಣಾ 11–8, 11–5, 11–8, 8–11, 11–5ರಲ್ಲಿ ತೃಪ್ತಿ ಎದುರೂ, ಯಶಸ್ವಿನಿ 11–6, 5–11, 11–4, 11–5, 7–11, 11–9ರಲ್ಲಿ ಅದಿತಿ ಮೇಲೂ ವಿಜಯಿಯಾಗಿದ್ದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.