ಮಳೆಯಿಂದ ರದ್ದಾದ ಪಂದ್ಯಕ್ಕೆ ₹ 100ಕೋಟಿ ವಿಮೆ? ನವದೆಹಲಿ: ವಿಶ್ವಕಪ್ ಕ್ರಿಕೆಟ್ ಟೂರ್ನಿಯಲ್ಲಿ ಭಾರತ ತಂಡವು ಆಡುವ ಯಾವುದೇ ಪಂದ್ಯವೂ ಮಳೆಯಿಂದ ರದ್ದಾಗದಿರಲಿ ಎಂದು ವಿಮಾ ಕಂಪೆನಿಗಳು ಪ್ರಾರ್ಥಿಸುತ್ತಿವೆ! ಭಾರತ ತಂಡವು ಆಡುವ ಪಂದ್ಯವು ಮಳೆಯಿಂದ ರದ್ದಾದರೆ ಕನಿಷ್ಠ ₹ 100 ಕೋಟಿ ಪರಿಹಾರ ಪಾವತಿಸಬೇಕಾಗುತ್ತದೆ. ಕ್ರಿಕೆಟ್‌ ಆಯೋಜಕರು ಮತ್ತು ಸಂಸ್ಥೆಗಳು ವಿಮೆ ಮಾಡಿಸಿವೆ ಎಂದು ಮೂಲಗಳು ತಿಳಿಸಿವೆ. ನ್ಯೂ ಇಂಡಿಯಾ ಅಶ್ಯುರೆನ್ಸ್‌, ಜನರಲ್ ಇನ್ಶೂರೆನ್ಸ್‌ ಕಾರ್ಪೊರೇಷನ್, ಐಸಿಐಸಿಐ ಲೊಂಬಾರ್ಡ್ ಜನರಲ್ ಇನ್ಶೂರೆನ್ಸ್‌ ಮತ್ತು ಒರಿಯಂಟಲ್ ಇನ್ಶೂರೆನ್ಸ್‌ ಸಂಸ್ಥೆಗಳಲ್ಲಿ ವಿಮೆ ಮಾಡಿಸಲಾಗಿದೆ. ‘ಮಳೆಯಿಂದಾಗಿ ಒಂದು ಪಂದ್ಯ ರದ್ದಾದರೂ ದೊಡ್ಡ ಮೊತ್ತದ ಪರಿಹಾರ ನೀಡಬೇಕಾಗುತ್ತದೆ’ ಎಂದು ಐಸಿಸಿಐ ಲೊಂಬಾರ್ಡ್ ನ ಮುಖ್ಯಸ್ಥ ಸಂಜಯ್ ದತ್ತಾ ಹೇಳಿದ್ದಾರೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.