ಸಿಎಫ್‌ಐಗೆ ಶ್ರೀಧರ ಗೋರೆ ಆಯ್ಕೆ ಹುಬ್ಬಳ್ಳಿ: ಭಾರತ ಸೈಕ್ಲಿಂಗ್ ಫೆಡರೇಷನ್‌ (ಸಿಎಫ್‌ಐ) ಉಪಾಧ್ಯಕ್ಷರಾಗಿ ವಿಜಯಪುರದ ಶ್ರೀಧರ ಎಂ. ಗೋರೆ ಆಯ್ಕೆಯಾಗಿದ್ದಾರೆ. ಮೊಹಾಲಿನಲ್ಲಿ ನಡೆದ ವಾರ್ಷಿಕ ಸಾಮಾನ್ಯ ಸಭೆ ಮತ್ತು ಚುನಾವಣೆಯಲ್ಲಿ ಆಯ್ಕೆ ನಡೆಯಿತು. ಜಮಖಂಡಿ ತಾಲ್ಲೂಕಿನ ಕುಂಬಾರಹಳ್ಳದ ಶ್ರೀಶೈಲ ಎಂ. ಕುರಣಿ ಕಾರ್ಯಕಾರಿ ಸಮಿತಿ ಸದಸ್ಯರಾಗಿ ಆಯ್ಕೆಯಾದರು. ಪಂಜಾಬ್‌ ರಾಜ್ಯದ ಹಿಂದಿನ ಹಣಕಾಸು ಸಚಿವ ಪರ್ಮಿಂದರ್‌ ಸಿಂಗ್ ದಿಂಡ್ಸಾ ಅಧ್ಯಕ್ಷರಾಗಿ ಆಯ್ಕೆಯಾದರು. ಹೊಸ ಸಮಿತಿಯ ಅಧಿಕಾರಾವಧಿ ನಾಲ್ಕು ವರ್ಷದ್ದಾಗಿರುತ್ತದೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.