ಸ್ನೂಕರ್‌: ಭಾರತ ಸೆಮಿಗೆ ದೋಹಾ (ಪಿಟಿಐ): ಪಂಕಜ್‌ ಅಡ್ವಾಣಿ ಮತ್ತು ಲಕ್ಷ್ಮಣ್‌ ರಾವತ್ ಅವರನ್ನು ಒಳಗೊಂಡ ಭಾರತ ತಂಡ, ಬದ್ಧ ಎದುರಾಳಿ ಪಾಕಿಸ್ತಾನ ತಂಡವನ್ನು ಸೋಲಿಸಿ ಏಷ್ಯನ್‌ ಟೀಮ್‌ ಸ್ನೂಕರ್‌ ಚಾಂಪಿಯನ್‌ಷಿಪ್‌ ಸೆಮಿಫೈನಲ್‌ಗೆ ಮುನ್ನಡೆದಿದೆ. ಪಂಕಜ್‌, ಗುರುವಾರ ನಡೆದ ಟೂರ್ನಿಯ ಮೊದಲ ಪಂದ್ಯದಲ್ಲಿ ಪಾಕಿಸ್ತಾನದ ಮೊಹಮ್ಮದ್‌ ಬಿಲಾಲ್‌ ಅವರನ್ನು ಸೋಲಿಸಿದರು. ಲಕ್ಷ್ಮಣ್‌ ಎರಡನೇ ಪಂದ್ಯದಲ್ಲಿ ಅಸ್ಜದ್‌ ಇಕ್ಬಾಲ್‌ ವಿರುದ್ಧ ಜಯಗಳಿಸಿದರು. ಈ ಗೆಲುವಿನಿಂದ ಭಾರತಕ್ಕೆ ಪದಕ ಖಚಿತವಾಗಿದೆ. ಭಾರತ ಸೆಮಿಫೈನಲ್‌ನಲ್ಲಿ ಮ್ಯಾನ್‌ಮಾರ್‌ ವಿರುದ್ಧ ಆಡಲಿದೆ. ಗುಂಪು ಹಂತದಲ್ಲಿ ಉತ್ತಮ ಪ್ರದರ್ಶನ ತೋರಿದ್ದರಿಂದ ಭಾರತ ಕ್ವಾರ್ಟರ್ಸ್‌ಗೆ ನೇರ ಪ್ರವೇಶ ಪಡೆದಿತ್ತು. ಆದರೆ ಪಾಕಿಸ್ತಾನ, ಆತಿಥೇಯ ಕತಾರ್‌ ತಂಡವನ್ನು ಗ್ರೂಪ್‌ ಕೊನೆಯ ಪಂದ್ಯದಲ್ಲಿ 3–1 ರಲ್ಲಿ ಸೋಲಿಸಿ ಕ್ವಾರ್ಟರ್‌ಫೈನಲ್‌ಗೆ ಅರ್ಹತೆ ಪಡೆದಿತ್ತು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.