ಸ್ನೂಕರ್‌: ಭಾರತದ ಗೆಲುವಿನ ಆರಂಭ ದೋಹಾ (ಪಿಟಿಐ): ಹಾಲಿ ಚಾಂಪಿಯನ್‌ ಭಾರತ ತಂಡವು ಐಬಿಎಸ್‌ಎಫ್‌ ಸ್ನೂಕರ್‌ ವಿಶ್ವಕಪ್‌ನಲ್ಲಿ ಗೆಲುವಿನ ಆರಂಭ ಕಂಡಿದೆ. ಶನಿವಾರ ಆಡಿದ ಎರಡು ಪಂದ್ಯಗಳಲ್ಲೂ ಭಾರತ ಜಯಭೇರಿ ಮೊಳಗಿಸಿದೆ. ಮೊದಲ ಪೈಪೋಟಿಯಲ್ಲಿ ಭಾರತ 3–0 ಫ್ರೇಮ್‌ಗಳಿಂದ ದಕ್ಷಿಣ ಆಫ್ರಿಕಾವನ್ನು ಮಣಿಸಿತು. ನಂತರದ ಹಣಾಹಣಿಯಲ್ಲಿ ತಂಡವು 3–1 ಫ್ರೇಮ್‌ಗಳಿಂದ ಥಾಯ್ಲೆಂಡ್‌ಗೆ ಸೋಲುಣಿಸಿತು. ಕರ್ನಾಟಕದ ಪಂಕಜ್‌ ಅಡ್ವಾಣಿ ಮತ್ತು ಲಕ್ಷ್ಮಣ್‌ ರಾವತ್‌ ಅವರು ಎರಡೂ ಹಣಾಹಣಿಗಳಲ್ಲಿ ಮಿಂಚಿದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.