ಬ್ಯಾಸ್ಕೆಟ್‌ಬಾಲ್‌: ಡಿವೈಇಎಸ್‌ಗೆ ಪ್ರಶಸ್ತಿ ಬೆಂಗಳೂರು: ವಿದ್ಯಾನಗರದ ಡಿವೈಇಎಸ್‌ ಮಹಿಳಾ ತಂಡದವರು ‘ಮಾತೃಕಪ್‌’ ಬ್ಯಾಸ್ಕೆಟ್‌ಬಾಲ್‌ ಟೂರ್ನಿಯಲ್ಲಿ ಪ್ರಶಸ್ತಿ ಗೆದ್ದಿದ್ದಾರೆ. ಕಂಠೀರವ ಕ್ರೀಡಾಂಗಣದಲ್ಲಿ ಶನಿವಾರ ನಡೆದ ಫೈನಲ್‌ನಲ್ಲಿ ಡಿವೈಇಎಸ್‌ 67–64 ಪಾಯಿಂಟ್ಸ್‌ನಿಂದ ಮೌಂಟ್ಸ್‌ ಕ್ಲಬ್‌ ತಂಡವನ್ನು ಸೋಲಿಸಿತು. ವಿಜಯಿ ತಂಡದ ಹರ್ಷಿತಾ ಮತ್ತು ಸಂಜನಾ ತಲಾ 20 ಪಾಯಿಂಟ್ಸ್‌ ಕಲೆಹಾಕಿದರು. ಮೂರನೇ ಸ್ಥಾನಕ್ಕಾಗಿ ನಡೆದ ಪೈಪೋಟಿಯಲ್ಲಿ ಮೈಸೂರಿನ ಡಿವೈಇಎಸ್‌ 26–21ರಲ್ಲಿ ಬೀಗಲ್ಸ್‌ ಕ್ಲಬ್‌ ತಂಡದ ಎದುರು ಗೆದ್ದಿತು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.