ಟಿ.ಟಿ: ಯಶಸ್ವಿನಿ ಚಾಂಪಿಯನ್‌ ಹುಬ್ಬಳ್ಳಿ: ಬೆಂಗಳೂರಿನ ಸ್ಕೈಸ್‌ ಕ್ಲಬ್‌ನಯಶಸ್ವಿನಿ ಘೋರ್ಪಡೆ, ಧಾರವಾಡದಲ್ಲಿ ಗುರುವಾರ ಆರಂಭವಾದ ಕಾಸ್ಮಸ್‌ ಕಪ್‌ ರಾಜ್ಯಮಟ್ಟದ ರ‍್ಯಾಂಕಿಂಗ್ ಟೇಬಲ್‌ ಟೆನಿಸ್‌ ಟೂರ್ನಿಯ ಮಹಿಳೆಯರ ಸಿಂಗಲ್ಸ್‌ ವಿಭಾಗದಲ್ಲಿ ಚಾಂಪಿಯನ್‌ ಆದರು. ಕಾಸ್ಮಸ್‌ ಕ್ಲಬ್‌ನಲ್ಲಿ ನಡೆದ ಫೈನಲ್‌ ಪಂದ್ಯದಲ್ಲಿ ಯಶಸ್ವಿನಿ 11-7, 12-14, 11-6, 11-8, 8-11, 8-11, 13-11ರಲ್ಲಿ ಕೆನರಾ ಬ್ಯಾಂಕ್‌ನ ಮರಿಯಾ ರೋನಿ ಎದುರು ಗೆಲುವು ಸಾಧಿಸಿದರು. ಸೆಮಿಫೈನಲ್‌ ಪಂದ್ಯಗಳಲ್ಲಿ ಮರಿಯಾ 11-8, 11-8, 10-12, 11-4, 11-4ರಲ್ಲಿ ಸ್ಕೈಸ್‌ ಕ್ಲಬ್‌ನ ಬಿ.ಟಿ. ಸಂಯುಕ್ತಾ ಮೇಲೂ, ಯಶಸ್ವಿನಿ 11-6, 11-5, 11-8, 11-8ರಲ್ಲಿ ಸ್ಕೈಸ್‌ ಕ್ಲಬ್‌ನ ಸುಷ್ಮಿತಾ ಆರ್‌. ಬಿದ್ರಿ ವಿರುದ್ಧವೂ ಗೆಲುವು ಪಡೆದಿದ್ದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.