ಬ್ಯಾಡ್ಮಿಂಟನ್‌: ಪ್ರೀ ಕ್ವಾರ್ಟರ್‌ಗೆ ಕಶ್ಯಪ್‌ ಕ್ಯಾಲ್ಗರಿ: ಭಾರತದ ಪರುಪಳ್ಳಿ ಕಶ್ಯಪ್‌ ಮತ್ತು ಸೌರಭ್‌ ವರ್ಮಾ ಅವರು ಕೆನಡಾ ಓಪನ್‌ ಬ್ಯಾಡ್ಮಿಂಟನ್‌ ಟೂರ್ನಿಯಲ್ಲಿ ಪ್ರೀ ಕ್ವಾರ್ಟರ್‌ ಫೈನಲ್‌ ಪ್ರವೇಶಿಸಿದ್ದಾರೆ. ಪುರುಷರ ಸಿಂಗಲ್ಸ್‌ ವಿಭಾಗದ ಪಂದ್ಯದಲ್ಲಿ ಆರನೇ ಶ್ರೇಯಾಂಕದ ಕಶ್ಯಪ್‌ 21–12, 21–17ರಲ್ಲಿ ಫ್ರಾನ್ಸ್‌ನ ಲುಕಸ್‌ ಕೊರ್ವಿ ಎದುರು ಗೆದ್ದರು. ಸೌರಭ್‌ 21–14, 21–11ರಲ್ಲಿ ಕೆನಡಾದ ಬಿ.ಆರ್‌.ಸಂಕೀರ್ತ್‌ ಅವರನ್ನು ಮಣಿಸಿದರು. ಅಜಯ್‌ ಜಯರಾಮ್‌ 19–21, 17–21ರಲ್ಲಿ ರಾಜೀವ್‌ ಔಸೆಫ್‌ ಎದುರು ಸೋತರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.