ಶೂಟಿಂಗ್‌: ಭಾರತದ ಸ್ಪರ್ಧಿಗಳಿಗೆ ನಿರಾಸೆ ನವದೆಹಲಿ: ಭಾರತದ ಶೂಟರ್‌ಗಳು, ಇಟಲಿಯ ಲೊನಾಟೊ ದಲ್ಲಿ ನಡೆಯುತ್ತಿರುವ ಶಾಟ್‌ಗನ್‌ ವಿಶ್ವ ಚಾಂಪಿಯನ್‌ಷಿಪ್‌ನ ಮೊದಲ ದಿನ ವಾದ ಬುಧವಾರ ವೈಯಕ್ತಿಕ ಟ್ರ್ಯಾಪ್‌ ವಿಭಾಗದಲ್ಲಿ ನಿರಾಸೆ ಮೂಡಿಸಿದರು. ಕಿನಾನ್‌ ಚೆನಾಯ್‌ ಅರ್ಹತಾ ಸುತ್ತಿ ನಲ್ಲಿ 125ರಲ್ಲಿ 118 ಪಾಯಿಂಟ್‌ ಗಳಿಸಿ 19ನೇಯವರಾಗಿ ಸ್ಪರ್ಧೆ ಮುಗಿಸಿದರು. ಪ್ರಥ್ವಿರಾಜ್‌ ತೊಂಡೈಮನ್‌ ಮತ್ತು ಜೊರಾವರ್‌ ಸಿಂಗ್‌ ಸಂಧು ಕ್ರಮವಾಗಿ 47 ಮತ್ತು 91ನೇ ಸ್ಥಾನ ಪಡೆದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.