ಕೋಚ್ ಮೇಲೆ ಮಣಿಕಾ ಬಾತ್ರಾರಿಂದ ಫಿಕ್ಸಿಂಗ್ ಆರೋಪ: ಟಿಟಿಎಫ್‌ಐ ಸಭೆ ನಾಳೆ ನವದೆಹಲಿ: ಒಲಿಂಪಿಯನ್ ಮಣಿಕಾ ಬಾತ್ರಾ ಅವರು ರಾಷ್ಟ್ರೀಯ ತಂಡದ ಕೋಚ್ ಸೌಮ್ಯದೀಪ್ ರಾಯ್ ಅವರ ಮೇಲೆ ಮಾಡಿರುವ ಪಂದ್ಯ ಫಿಕ್ಸಿಂಗ್ ಆರೋಪದ ವಿಚಾರಣೆಗಾಗಿ ಶನಿವಾರ ಭಾರತ ಟೇಬಲ್ ಟೆನಿಸ್ ಫೆಡರೇಷನ್ (ಟಿಟಿಎಫ್‌ಐ) ಕಾರ್ಯನಿರ್ವಾಹಕ ಸಮಿತಿ ಸಭೆ ನಡೆಯಲಿದೆ. ಮಣಿಕಾ ಅವರು ದೂರು ಕೊಟ್ಟ ನಂತರ ರಾಯ್ ಅವರಿಗೆ ಟಿಟಿಎಫ್‌ಐ ಶೋಕಾಸ್ ನೋಟಿಸ್ ಜಾರಿ ಮಾಡಿತ್ತು. ‘ವರ್ಚುವಲ್ ಸಭೆಯಲ್ಲಿ ವಿಷಯವನ್ನು ಚರ್ಚಿಸಲಾಗುವುದು. ವಿಚಾರಣೆ ಸಮಿತಿಯು ಕೂಲಂಕಷವಾಗಿ ಪರಿಶೀಲಿಸಿ ತೀರ್ಮಾನ ನೀಡಲಿದೆ’ ಎಂದು ಟಿಟಿಎಫ್‌ಐ ಕಾರ್ಯದರ್ಶಿ ಅರುಣ್ ಬ್ಯಾನರ್ಜಿ ತಿಳಿಸಿದ್ದಾರೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.