ಕೋವಿಡ್: ಹಿರಿಯ ವಾಲಿಬಾಲ್ ಆಟಗಾರ ಕೆ.ಎಸ್. ಮಂಜುನಾಥ್ ನಿಧನ ಬೆಂಗಳೂರು: ಕರ್ನಾಟಕದ ಹಿರಿಯ ವಾಲಿಬಾಲ್ ಆಟಗಾರ ಕೆ.ಎಸ್. ಮಂಜುನಾಥ್ (49) ಕೋವಿಡ್‌ನಿಂದ ಬುಧವಾರ ಬೆಂಗಳೂರಿನಲ್ಲಿ ಮೃತಪಟ್ಟಿದ್ದಾರೆ. ಅವರಿಗೆ ಪತ್ನಿ, ಇಬ್ಬರು ಮಕ್ಕಳಿದ್ದಾರೆ. ಜೂನಿಯರ್, ಯುವ ಮತ್ತು ಸೀನಿಯರ್ ವಿಭಾಗಗಳಲ್ಲಿ ರಾಜ್ಯವನ್ನು ಪ್ರತಿನಿಧಿಸಿದ್ದರು. ಏಜೀಸ್ (ಎಜಿಒಆರ್‌ಸಿ) ತಂಡವನ್ನು ಹತ್ತು ವರ್ಷ ಪ್ರತಿನಿಧಿಸಿದ್ದರು. ಅದೇ ಸಂಸ್ಥೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.