ಹಾಕಿ ಇಂಡಿಯಾಗೆ 126 ಅಂಪೈರ್‌, ಅಧಿಕಾರಿ ಸೇರ್ಪಡೆ ನವದೆಹಲಿ: ದೇಶಿ ಮಟ್ಟದ ಜೂನಿಯರ್ ಮತ್ತು ಸಬ್‌ಜೂನಿಯರ್ ಟೂರ್ನಿಗಳಲ್ಲಿ ಭಾಗವಹಿಸಲು ಅರ್ಹತೆ ಗಳಿಸಿರುವ 126 ಮಂದಿ ಅಂಪೈರ್‌ ಮತ್ತು ತಾಂತ್ರಿಕ ಸಿಬ್ಬಂದಿಯನ್ನು ಹಾಕಿ ಇಂಡಿಯಾ ಸೋಮವಾರ ಸೇರ್ಪಡೆಗೊಳಿಸಿದೆ. ಕಳೆದ ವರ್ಷದ ಸೆಪ್ಟೆಂಬರ್‌ನಿಂದ ಮಾರ್ಚ್‌ ವರೆಗೆ ಎರಡು ಹಂತಗಳಲ್ಲಿ ನಡೆದ ಆನ್‌ಲೈನ್ ಕಾರ್ಯಾಗಾರದ ನಂತರ ಜಡ್ಜ್‌ಗಳು ಒಳಗೊಂಡ ತಾಂತ್ರಿಕ ಅಧಿಕಾರಿಗಳು ಹಾಗೂ ಅಂಪೈರ್‌ಗಳನ್ನು ಆರಿಸಲಾಗಿದೆ. 16 ಮಹಿಳೆಯರು ಒಳಗೊಂಡಂತೆ 66 ಅಂಪೈರ್‌ಗಳು ಮತ್ತು 21 ಮಹಿಳೆಯರು ಒಳಗೊಂಡಂತೆ 60 ತಾಂತ್ರಿಕ ಅಧಿಕಾರಿಗಳು ತಂಡದಲ್ಲಿದ್ದಾರೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.