ಶೂಟಿಂಗ್‌: ತೇಜಸ್ವಿನಿಗೆ ಅಗ್ರಸ್ಥಾನ ನವದೆಹಲಿ: ಮಾಜಿ ವಿಶ್ವ ಚಾಂಪಿಯನ್‌, ಭಾರತದ ತೇಜಸ್ವಿನಿ ಸಾವಂತ್ ಅವರು ಕ್ರೊವೇಷ್ಯಾದಲ್ಲಿ ನಡೆಯುತ್ತಿರುವ ಯುರೋಪಿಯನ್ ಶೂಟಿಂಗ್ ಚಾಂಪಿಯನ್‌ಷಿಪ್‌ನ ಕನಿಷ್ಠ ಅರ್ಹತಾ ಸ್ಕೋರ್‌ (ಎಂಕ್ಯುಎಸ್‌) ಸುತ್ತಿನಲ್ಲಿ ಅಗ್ರ ಸ್ಥಾನ ಗಳಿಸಿದ್ದಾರೆ. ಗುರುವಾರ ನಡೆದ ಮಹಿಳೆಯರ 50 ಮೀಟರ್ಸ್‌ ರೈಫಲ್ ತ್ರಿ ಪೊಸಿಷನ್‌ನಲ್ಲಿ ಮಹಾರಾಷ್ಟ್ರದ ತೇಜಸ್ವಿನಿ 622.7 ಸ್ಕೋರು ಗಳಿಸಿ ಭಾರತದ ಮೂವರು ಮತ್ತು ಇರಾನ್‌ನ ಆರು ಸ್ಪರ್ಧಿಗಳನ್ನು ಹಿಂದಿಕ್ಕಿದರು. ಯುವ ಶೂಟರ್‌ ಐಶ್ವರ್ಯಾ ಪ್ರತಾತ್ ಸಿಂಗ್ ತೋಮರ್ 620.3 ‍ಸ್ಕೋರು ಗಳಿಸಿದರೆ ಸಂಜೀವ್ ರಜಪೂತ್ 619.7 ಮತ್ತು ಅಂಜುಮ್ ಮೌದ್ಗಿಲ್619.2 ಸ್ಕೋರ್ ದಾಖಲಿಸಿದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.