ಐಎಯುಗೆ ನಾಗರಾಜ ಅಡಿಗ ನೇಮಕ ನವದೆಹಲಿ: ಅಂತರರಾಷ್ಟ್ರೀಯ ಅಲ್ಟ್ರಾ ರನ್ನರ್ಸ್ ಸಂಸ್ಥೆಯ (ಐಎಯು) ಏಷ್ಯಾ ಒಷಿನಿಯಾ ಪ್ರತಿನಿಧಿಯಾಗಿ ಭಾರತದ ನಾಗರಾಜ ಅಡಿಗ ಆಯ್ಕೆಯಾಗಿದ್ದಾರೆ. ಕೋವಿಡ್‌ನಿಂದಾಗಿ ಈ ಬಾರಿಯ ಸಮಾವೇಶವನ್ನು ವರ್ಚುವಲ್ ಆಗಿ ನಡೆಸಲಾಗಿತ್ತು. ಕಳೆದ 22 ಮತ್ತು 23ರಂದು ಸಮಾವೇಶ ನಡೆದಿತ್ತು. ಏಷ್ಯಾ ಒಷಿನಿಯಾ ಪ್ರತಿನಿಧಿಯ ಆಯ್ಕೆಗಾಗಿ 24 ತಾಸುಗಳ ಮತದಾನ ನಡೆದಿತ್ತು. ಆನ್‌ಲೈನ್ ಮೂಲಕ ನಡೆದ ಮತದಾನದಲ್ಲಿ 10 ರಾಷ್ಟ್ರಗಳು ಪಾಲ್ಗೊಂಡಿದ್ದವು. ದಕ್ಷಿಣ ಕೊರಿಯಾದ ಗಿಲ್ಸೂ ಪಾರ್ಕ್‌ ಅವರನ್ನು ನಾಗರಾಜ 7–3 ಮತಗಳಿಂದ ಮಣಿಸಿದರು ಎಂದು ಭಾರತ ಅಥ್ಲೆಟಿಕ್ ಫೆಡರೇಷನ್‌ (ಎಎಫ್‌ಐ) ಪ್ರಕಟಣೆಯಲ್ಲಿ ತಿಳಿಸಿದೆ. ಆರೋಗ್ಯ ಮತ್ತು ಫಿಟ್‌ನೆಸ್‌ಗೆ ಸಂಬಂಧಿಸಿ ಎಎಫ್‌ಐ ಮತ್ತು ವಿವಿಧ ಸರ್ಕಾರಿ ಸಂಸ್ಥೆಗಳ ಜೊತೆ ಕೆಲಸ ಮಾಡುತ್ತಿರುವ ನಾಗರಾಜ ಯುವ ಕ್ರೀಡಾಪಟುಗಳನ್ನು ಬೆಳೆಸುವ ಕಾರ್ಯದಲ್ಲೂ ತೊಡಗಿಸಿಕೊಂಡಿದ್ದಾರೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.