: ಆರ್ಚರಿಯಲ್ಲಿ ದೇಶಕ್ಕೆ ಮೊದಲ ಪದಕ; ದಾಖಲೆ ಬರೆದ ಹರ್ವಿಂದರ್ ಸಿಂಗ್ ಟೋಕಿಯೊ:ಜಪಾನ್‌ನಲ್ಲಿ ನಡೆಯುತ್ತಿರುವ ಪ್ಯಾರಾಲಿಂಪಿಕ್ಸ್‌ನ ಆರ್ಚರಿ ಸ್ಪರ್ಧೆಯಲ್ಲಿಭಾರತದ ಹರ್ವಿಂದರ್‌ ಸಿಂಗ್‌ ಕಂಚಿನ ಪದಕ ಗೆದ್ದ ಸಾಧನೆ ಮಾಡಿದ್ದಾರೆ. ಆ ಮೂಲಕ ಪ್ಯಾರಾ ಕ್ರೀಡೆಗಳ ಈ ಸ್ಪರ್ಧೆಯಲ್ಲಿ ದೇಶಕ್ಕೆ ಮೊದಲ ಪದಕ ಗೆದ್ದುಕೊಟ್ಟ ಶ್ರೇಯಕ್ಕೆ ಭಾಜನರಾಗಿದ್ದಾರೆ. ಸೆಮಿಫೈನಲ್‌ನಲ್ಲಿ ಅಮೆರಿಕದ ಕೆವಿನ್‌ ಮಥರ್‌ ಎದುರು 6-4 ಅಂತರದಿಂದ ಮಣಿದಸಿಂಗ್‌, ಕಂಚಿನ ಪದಕಕ್ಕಾಗಿಕೊರಿಯಾದ ಕಿಮ್‌ ಮಿನ್‌ ಸು ಜೊತೆ ಸೆಣಸಿದರು. ಕಿಮ್‌ ವಿರುದ್ಧ 6-5 ಅಂತರದ ಗೆಲುವು ಸಾಧಿಸಿದರು. ಸಿಂಗ್‌ ಎದುರು ಸೆಮಿಯಲ್ಲಿ ಜಯ ಸಾಧಿಸಿದ ಮಥರ್ ಫೈನಲ್‌ನಲ್ಲಿ ಚೀನಾದಝಾವೋ ಎಲ್ ಎದುರು‌6-4 ಅಂತರದಿಂದ ಗೆದ್ದು ಚಿನ್ನದ‌ ಪದಕಕ್ಕೆ ಕೊರಳೊಡ್ಡಿದರು. ವಿಶ್ವದ ನಂ.23 ಶ್ರೇಯಾಂಕದ ಸಿಂಗ್‌ ಪಂಜಾಬ್‌ನವರು. 2018ರ ಏಷಿಯನ್‌ ಗೇಮ್ಸ್‌ನಲ್ಲಿ ಚಿನ್ನದ ಪದಕ ಗೆದ್ದ ಸಾಧನೆ ಮಾಡಿದ್ದರು. ಇವನ್ನೂ ಓದಿ * : ಹೈಜಂಪ್‌ನಲ್ಲಿ ಬೆಳ್ಳಿ ಗೆದ್ದ 18 ವರ್ಷದ ಪ್ರವೀಣ್ ಕುಮಾರ್ *: ಚಿನ್ನ ಬೆನ್ನಲ್ಲೇ ಕಂಚು ಗೆದ್ದ 19 ವರ್ಷದ ಅವನಿ ಐತಿಹಾಸಿಕ ಸಾಧನೆ *ನನ್ನ ಸಾಧನೆಗೆ ನೀರಜ್‌ ಚೋಪ್ರಾ ಸ್ಫೂರ್ತಿ: ಪ್ಯಾರಾಲಿಂಪಿಕ್ಸ್ ಪದಕ ವಿಜೇತ ಸುಮಿತ್ ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.