ಕರ್ನಾಟಕದ ಅದಿತಿ ಅಶೋಕ್‌ಗೆ ಟೋಕಿಯೊ ಟಿಕೆಟ್ ನವದೆಹಲಿ: ಭಾರತದ ಅಗ್ರಶ್ರೇಯಾಂಕದ ಮಹಿಳಾ ಗಾಲ್ಫ್‌ರ್ ಅದಿತಿ ಅಶೋಕ್ ಸತತ ಎರಡನೇ ಬಾರಿ ಒಲಿಂಪಿಕ್ಸ್‌ನಲ್ಲಿ ಸ್ಪರ್ಧಿಸಲು ಅರ್ಹತೆ ಗಳಿಸಿದ್ದಾರೆ. ಕರ್ನಾಟಕದ ಅದಿತಿ ಅವರು ಮಂಗಳವಾರ ಬಿಡುಗಡೆಯಾದ ಒಲಿಂಪಿಕ್ಸ್ ಗಾಲ್ಫ್ ಅರ್ಹತಾ ಪಟ್ಟಿಯಲ್ಲಿ 45ನೇ ಸ್ಥಾನ ಪಡೆದಿದ್ದಾರೆ. ಅದಿತಿ 2016ರ ಒಲಿಂಪಿಕ್ಸ್‌ನಲ್ಲಿಯೂ ಸ್ಪರ್ಧಿಸಿದ್ದರು. ಭಾರತದ ಅಗ್ರಮಾನ್ಯ ಗಾಲ್ಫರ್‌ಗಳಾದ ಅನಿರ್ಬನ್ ಲಹಿರಿ ಮತ್ತು ಉದಯನ್ ಮಾನೆ ಅವರೂ ಅರ್ಹತೆ ಗಳಿಸಿದದ್ದಾರೆ. ‘ರಿಯೊ ಒಲಿಂಪಿಕ್ಸ್‌ ನಿನ್ನೆ, ಮೊನ್ನೆಯಷ್ಟೇ ಆಗಿರುವಂತಿದೆ. ಈಗ ಮತ್ತೊಮ್ಮೆ ದೇಶವನ್ನು ನನ್ನ ನೆಚ್ಚಿನ ಕ್ರೀಡೆಯಲ್ಲಿ ಒಲಿಂಪಿಕ್ಸ್‌ನಲ್ಲಿ ಪ್ರತಿನಿಧಿಸುವ ಅವಕಾಶ ಒದಗಿಬಂದಿದೆ. ಇದು ನಿಜಕ್ಕೂ ಹೆಮ್ಮೆಯ ಸಂಗತಿ‘ ಎಂದು ಅದಿತಿ ಟ್ವೀಟ್ ಮಾಡಿದ್ದಾರೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.