ವಿರಾಮದಿಂದ ಅನುಕೂಲವೇ ಆಗಿದೆ: ಸಿಂಧು ಹೈದರಾಬಾದ್‌: ಕೋವಿಡ್‌ನಿಂದಾಗಿ ಲಭಿಸಿರುವ ವಿರಾಮದಿಂದ ವೈಯಕ್ತಿಕ ವಾಗಿ ತಮಗೆ ಅನುಕೂಲ ಆಗಿದ್ದು ತಂತ್ರಗಾರಿಕೆ ಮತ್ತು ನೈಪುಣ್ಯ ಹೆಚ್ಚಿಸಲು ನೆರವಾಗಿದೆ ಎಂದು ಭಾರತದ ಬ್ಯಾಡ್ಮಿಂಟನ್ ಆಟಗಾರ್ತಿ ಪಿ.ವಿ.ಸಿಂಧು ಹೇಳಿದ್ದಾರೆ. ರಿಯೊ ಒಲಿಂಪಿಕ್ಸ್‌ನಲ್ಲಿ ಬೆಳ್ಳಿ ಪದಕ ಗೆದ್ದಿರುವ ಸಿಂಧು ಅವರ ಅಭ್ಯಾಸಕ್ಕೆ ಕೊರೊನಾ ಅಡ್ಡಿಯಾಗಿತ್ತು. ಒಂದು ವರ್ಷದಿಂದ ಅವರಿಗೆ ಯಾವ ಟೂರ್ನಿಯಲ್ಲೂ ಆಡಲು ಸಾಧ್ಯವಾಗಲಿಲ್ಲ. ಆದರೆ ಈ ಅವಧಿ ತಮ್ಮ ಪಾಲಿಗೆ ಅದೃಷ್ಟವಾಗಿ ಪರಿಣಮಿಸಿದೆ ಎಂದು ಸಿಂಧು ಹೇಳಿದರು. ‘ಸಾಮಾನ್ಯವಾಗಿ ಅಭ್ಯಾಸ ಮಾಡಲು ಅವಕಾಶ ಸಿಗುವುದು ಕಡಿಮೆ. ಆ ಹಿನ್ನೆಲೆಯಲ್ಲಿ ನೋಡಿದರೆ ಇದೇ ಮೊದಲ ಬಾರಿ ಅಭ್ಯಾಸಕ್ಕೆ ಸಾಕಷ್ಟು ಸಮಯ ಸಿಕ್ಕಿದೆ. ಒಲಿಂಪಿಕ್ಸ್‌ಗೆ ಸಿದ್ಧವಾಗಲು ಇದು ನೆರವಾಗಿದೆ. ಕೋವಿಡ್‌ನಿಂದಾಗಿ ಒಲಿಂಪಿಕ್ಸ್‌ ಸಿದ್ಧತೆಗೆ ಯಾವ ರೀತಿಯಲ್ಲೂ ತೊಂದರೆಯಾಗಲಿಲ್ಲ’ ಎಂದು ಅವರು ವಿವರಿಸಿದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.